15ನೇ ವಯಸ್ಸಲ್ಲಿ ಬಿಎ ಅಂತಿಮ ಪರೀಕ್ಷೆ; ವಿದ್ಯಾರ್ಥಿನಿಗೆ ಮೋದಿ ಕೊಟ್ಟ ಸಲಹೆಯೇನು ಗೊತ್ತಾ ?

ತನ್ನ 15 ನೇ ವಯಸ್ಸಿನಲ್ಲೇ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಅಂತಿಮ ವರ್ಷದ ಪರೀಕ್ಷೆಗಳಿಗೆ ಹಾಜರಾಗಲು ಮಧ್ಯಪ್ರದೇಶದ ಇಂದೋರ್‌ನ ಪ್ರತಿಭಾನ್ವಿತ ವಿದ್ಯಾರ್ಥಿನಿ ತನಿಷ್ಕಾ ಸುಜಿತ್ ಸಿದ್ಧಳಾಗಿದ್ದಾರೆ.

ಮುಂದೆ ಕಾನೂನನ್ನು ಮತ್ತಷ್ಟು ಅಧ್ಯಯನ ಮಾಡಿ ದೇಶದ ಮುಖ್ಯ ನ್ಯಾಯಾಧೀಶರಾಗುವ ಗುರಿಯನ್ನು ಹೊಂದಿದ್ದಾರೆ.

2020 ರಲ್ಲಿ ಕೋವಿಡ್ 19 ಗೆ ತನ್ನ ತಂದೆ ಮತ್ತು ಅಜ್ಜನನ್ನು ಕಳೆದುಕೊಂಡ ಹದಿಹರೆಯದ ತನಿಷ್ಕಾ ಕೆಲವು ದಿನಗಳ ಹಿಂದೆ ಭೋಪಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯನ್ನು ಮತ್ತು ತನ್ನ ಕನಸನ್ನು ಮುಂದುವರಿಸಲು ಅವರು ಹೇಗೆ ಪ್ರೋತ್ಸಾಹಿಸಿದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಇಂದೋರ್‌ನ ದೇವಿ ಅಹಲ್ಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಸುಜಿತ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಏಪ್ರಿಲ್ 19 ರಿಂದ 28 ರವರೆಗೆ ನಡೆಯಲಿರುವ ತನ್ನ ಬಿಎ (ಮನೋವಿಜ್ಞಾನ) ಅಂತಿಮ ವರ್ಷದ ಪರೀಕ್ಷೆಗಳಿಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಅವರು 10 ನೇ ತರಗತಿಯನ್ನು ಮೊದಲ ಸ್ಥಾನದಲ್ಲಿ ಉತ್ತೀರ್ಣರಾದ ನಂತರ 13 ನೇ ವಯಸ್ಸಿನಲ್ಲಿ 12 ನೇ ತರಗತಿ ಪರೀಕ್ಷೆಯನ್ನು ತೇರ್ಗಡೆ ಮಾಡಿದ್ದರು.

ದೇವಿ ಅಹಲ್ಯಾ ವಿಶ್ವವಿದ್ಯಾನಿಲಯದ ಸಮಾಜ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥೆ ರೇಖಾ ಆಚಾರ್ಯ ಮಾತನಾಡಿ, ಸುಜಿತ್‌ಗೆ 13ನೇ ವಯಸ್ಸಿನಲ್ಲಿ ವಿಶ್ವವಿದ್ಯಾಲಯವು ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಬಿಎ (ಮನಃಶಾಸ್ತ್ರ) ಮೊದಲ ವರ್ಷಕ್ಕೆ ಪ್ರವೇಶ ನೀಡಲಾಯಿತು. ಇದೊಂದು ವಿಶೇಷ ಪ್ರಕರಣವಾಗಿದೆ ಎಂದರು.

ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನಕ್ಕಾಗಿ ಏಪ್ರಿಲ್ 1 ರಂದು ರಾಜ್ಯದ ರಾಜಧಾನಿ ಭೋಪಾಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುಜಿತ್ ಪ್ರಧಾನಿ ಮೋದಿ ಅವರನ್ನು ಭೇಟಿಯಾದರು.

ಸುಮಾರು 15 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ತಾನು ಬಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅಮೆರಿಕದಲ್ಲಿ ಕಾನೂನು ಕಲಿಯಲು ಬಯಸಿದ್ದೇನೆ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಕನಸು ಕಂಡಿದ್ದೇನೆ ಎಂದು ಪ್ರಧಾನಿ ಮೋದಿಯೊಂದಿಗಿನ ಮಾತುಕತೆ ವೇಳೆ ತಿಳಿಸಿದ್ದರು.

ಸುಪ್ರೀಂ ಕೋರ್ಟ್‌ಗೆ ಹೋಗಿ ಅಲ್ಲಿನ ವಕೀಲರ ವಾದಗಳನ್ನು ವೀಕ್ಷಿಸಿ. ಅದು ನಿನ್ನ ಗುರಿಯನ್ನು ಸಾಧಿಸಲು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ ಸುಜಿತ್ ಗೆ ಸಲಹೆ ನೀಡಿದ್ದಾರೆ ಸ್ಮರಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read