ಮಹಾರಾಷ್ಟ್ರದಲ್ಲಿ ವಿಲೇಜ್ ಅಕೌಂಟೆಂಟ್ (‘ಸಿ’ ವರ್ಗದ) ಸರ್ಕಾರಿ ಹುದ್ದೆಗಳಿಗೆ ಅರ್ಜಿ ಕರೆದಿದ್ದು, 4,600 ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳಿಗೆ ಎಂಬಿಎ, ಎಂಜಿನಿಯರ್‌ಗಳು ಮತ್ತು ಪಿಎಚ್‌ಡಿ ಹೊಂದಿರುವವರು ಸೇರಿದಂತೆ 10 ಲಕ್ಷಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ವಿಲೇಜ್ ಅಕೌಂಟೆಂಟ್ ಹುದ್ದೆಯಲ್ಲಿರುವವರ ಕೆಲಸವು ಭೂ ಕಂದಾಯದ ಬೇಡಿಕೆ ಮತ್ತು ಸಂಗ್ರಹಣೆ, ಹಕ್ಕುಗಳ ದಾಖಲೆ ಮತ್ತು ಸರ್ಕಾರವು ಸೂಚಿಸಿದ ಇತರ ಗ್ರಾಮ ನಮೂನೆಗಳಿಗೆ ಸಂಬಂಧಿಸಿದ ಗ್ರಾಮ ಖಾತೆಗಳನ್ನು ನಿರ್ವಹಿಸುವುದು, ಬೆಳೆಗಳು ಮತ್ತು ಗಡಿ ಗುರುತುಗಳನ್ನು ಪರಿಶೀಲಿಸುವುದು ಮತ್ತು ಕೃಷಿ ಅಂಕಿಅಂಶಗಳನ್ನು ಸಿದ್ಧಪಡಿಸುವುದು ಆಗಿದೆ. ವಿಲೇಜ್ ಅಕೌಂಟೆಂಟ್ ಸಿ ವರ್ಗದ ಉದ್ಯೋಗವಾಗಿದ್ದು, ಅವರು ರೂ. 25,500 ದಿಂದ ರೂ. 81,100 ವೇತನ ಶ್ರೇಣಿಯಲ್ಲಿ ಮಾಸಿಕ ವೇತನವನ್ನು ಪಡೆಯುತ್ತಾರೆ.
4,600 ಹುದ್ದೆಗಳಿಗೆ 10.53 ಲಕ್ಷ ಅರ್ಜಿಗಳು ಬಂದಿವೆ. ಪರೀಕ್ಷೆಯು ರಾಜ್ಯದಾದ್ಯಂತ ಜಿಲ್ಲೆಗಳ ವಿವಿಧ ಕೇಂದ್ರಗಳಲ್ಲಿ ಆಗಸ್ಟ್ 17 ಮತ್ತು ಸೆಪ್ಟೆಂಬರ್ 14 ರ ನಡುವೆ ಮೂರು ಪಾಳಿಗಳಲ್ಲಿ ನಡೆಯುತ್ತದೆ. ಯಾವುದೇ ಪದವೀಧರರು ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾದರೂ, ಎಂಬಿಎ, ಪಿಎಚ್‌ಡಿ, ಬಿಎಎಂಎಸ್, ಬಿಎಚ್‌ಎಂಎಸ್ ಮತ್ತು ಎಂಜಿನಿಯರಿಂಗ್‌ನಂತಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ರಾಜ್ಯ ಪರೀಕ್ಷೆಗಳ ಸಂಯೋಜಕ ಮತ್ತು ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕ ಆನಂದ್ ರಾಯಟೆ ಹೇಳಿದ್ರು.