alex Certify 1.5 ಲಕ್ಷಕ್ಕೆ ಟಾಟಾ ಕಂಪನಿಯ ಅಗ್ಗದ ಕಾರನ್ನು ಮನೆಗೆ ತನ್ನಿ; ಸೇಫ್ಟಿಯಲ್ಲಿ 4 ಸ್ಟಾರ್‌ ಜೊತೆಗಿದೆ ಇಷ್ಟೆಲ್ಲಾ ವೈಶಿಷ್ಟ್ಯಗಳು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1.5 ಲಕ್ಷಕ್ಕೆ ಟಾಟಾ ಕಂಪನಿಯ ಅಗ್ಗದ ಕಾರನ್ನು ಮನೆಗೆ ತನ್ನಿ; ಸೇಫ್ಟಿಯಲ್ಲಿ 4 ಸ್ಟಾರ್‌ ಜೊತೆಗಿದೆ ಇಷ್ಟೆಲ್ಲಾ ವೈಶಿಷ್ಟ್ಯಗಳು…..!

ಟಾಟಾ ಮೋಟಾರ್ಸ್ ವಾಹನಗಳನ್ನು ಜನರು ಹೆಚ್ಚು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಹಾಗಾಗಿ ಕಂಪನಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ.

ಪ್ರಸ್ತುತ ದೇಶದಲ್ಲಿ ಮೂರನೇ ಅತಿ ದೊಡ್ಡ ಕಾರು ಮಾರಾಟ ಕಂಪನಿ ಎನಿಸಿಕೊಂಡಿದೆ. ಟಾಟಾ ಮೋಟಾರ್ಸ್‌ ನಲ್ಲಿ ವಿವಿಧ ಬೆಲೆಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿದ ಅನೇಕ ಕಾರಿನ ಮಾದರಿಗಳಿವೆ. ಇವುಗಳಲ್ಲಿ ಅತ್ಯಂತ ಅಗ್ಗದ ಕಾರು ಟಾಟಾ ಟಿಯಾಗೊ.

ಕಂಪನಿಯ ಈ ಹ್ಯಾಚ್‌ ಬ್ಯಾಕ್‌ನಲ್ಲಿ 5 ಜನರು ಕುಳಿತುಕೊಳ್ಳಬಹುದು. ಮಾರುತಿ ಸೆಲೆರಿಯೊ ಮತ್ತು ವ್ಯಾಗನಾರ್‌  ನಂತಹ ಕಾರುಗಳಿಗೆ ಇದು ಟಕ್ಕರ್‌ ಕೊಡ್ತಿದೆ. ಕೇವಲ 1.5 ಲಕ್ಷ ರೂಪಾಯಿ ಖರ್ಚು ಮಾಡಿ ಈ ಕಾರನ್ನು ನೀವು ಮನೆಗೆ ತರಬಹುದು. ಕಂಪನಿಯು ಇತ್ತೀಚೆಗೆ ಟಾಟಾ ಟಿಯಾಗೊ ಬೆಲೆಯನ್ನು 15,000 ರೂಪಾಯಿವರೆಗೆ ಹೆಚ್ಚಿಸಿದೆ. ಈಗ ಇದರ ಬೆಲೆ 5.54 ಲಕ್ಷ ರೂಪಾಯಿಯಿಂದ ಆರಂಭವಾಗಿ 8.05 ಲಕ್ಷದವರೆಗಿದೆ.

XE, XM, XT(O), XT, XZ ಮತ್ತು XZ+ ಎಂಬ ಆರು ಟ್ರಿಮ್‌ಗಳಲ್ಲಿ ಇದನ್ನು ಮಾರಾಟ ಮಾಡಲಾಗುತ್ತದೆ. ನೀವು ಈ ಕಾರನ್ನು ಲೋನ್‌ನಲ್ಲಿ ಖರೀದಿಸಲು ಬಯಸಿದರೆ, 1.5 ಲಕ್ಷ ರೂಪಾಯಿಗಳನ್ನು ಪಾವತಿಸುವ ಮೂಲಕವೂ ಪಡೆಯಬಹುದು. ಕಾರಿನ ಮೂಲ ರೂಪಾಂತರವನ್ನೇ ಖರೀದಿಸಲು ಬಯಸಿದರೆ ಅದರ ವೆಚ್ಚ 6.35 ಲಕ್ಷ ರೂಪಾಯಿಗಳಷ್ಟಾಗುತ್ತದೆ. ಸಾಲದ ಮೇಲೆ ಖರೀದಿಸಲು ಇಚ್ಛಿಸಿದರೆ ನೀವು ಹೆಚ್ಚಿನ ಡೌನ್ ಪೇಮೆಂಟ್ ಅನ್ನು ಸಹ ನೀಡಬಹುದು.

ವಿವಿಧ ಬ್ಯಾಂಕ್‌ಗಳಲ್ಲಿ ಬಡ್ಡಿದರವು ವಿಭಿನ್ನವಾಗಿರುತ್ತದೆ. ಸಾಲದ ಅವಧಿಯನ್ನು 1 ರಿಂದ 7 ವರ್ಷಗಳ ಅವಧಿವರೆಗೆ ಆಯ್ಕೆ ಮಾಡಬಹುದು. ಉದಾಹರಣೆಗೆ 1.5 ಲಕ್ಷ ರೂಪಾಯಿ ಡೌನ್ ಪೇಮೆಂಟ್, ಶೇ.9.8ರಷ್ಟು ಬಡ್ಡಿದರ ಮತ್ತು 5 ವರ್ಷಗಳ ಸಾಲದ ಅವಧಿಯನ್ನು ಊಹಿಸೋಣ. ಆಗ ನೀವು ಪ್ರತಿ ತಿಂಗಳು 10,262 ರೂಪಾಯಿ EMI ಅನ್ನು ಪಾವತಿಸಬೇಕಾಗುತ್ತದೆ. ನೀವು ಒಟ್ಟು ಸಾಲದ ಮೊತ್ತಕ್ಕೆ (ರೂ. 4.85 ಲಕ್ಷ) ಹೆಚ್ಚುವರಿಯಾಗಿ 1.30 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ.

ಟಾಟಾ ಟಿಯಾಗೊ ವೈಶಿಷ್ಟ್ಯಗಳು

ಇದು Apple CarPlay ಮತ್ತು Android Auto ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. LED DRL ಗಳೊಂದಿಗೆ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ವೈಪರ್‌ನೊಂದಿಗೆ ಹಿಂಭಾಗದ ಡಿಫಾಗರ್ ಅನ್ನು ಸಹ ಅಳವಡಿಸಲಾಗಿದೆ. ಎಂಟು ಸ್ಪೀಕರ್ ಸೌಂಡ್ ಸಿಸ್ಟಮ್, ಸ್ವಯಂಚಾಲಿತ ಹವಾನಿಯಂತ್ರಣ ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್ ಇದರಲ್ಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...