ಆಲೂಗಡ್ಡೆ, ಟೊಮ್ಯಾಟೋ, ಈರುಳ್ಳಿ, ಹಸಿರು ಬಟಾಣಿ, ಬೀನ್ಸ್, ಸೋಯಾಬೀನ್, ಪಾಲಾಕ್ ಸೊಪ್ಪು, ಬ್ರೊಕೊಲಿ ನಿಮ್ಮ ಹೃದಯದ ಆರೋಗ್ಯವನ್ನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಆಹಾರ ಪದಾರ್ಥಗಳು ಹೃದಯದ ಆರೋಗ್ಯಕ್ಕೆ ಅಗತ್ಯವಾದ ಖನಿಜಾಂಶ ಹಾಗೂ ಜೀವಸತ್ವಗಳನ್ನ ಹೊಂದಿವೆ. ಇವು ರಕ್ತದೊತ್ತಡವನ್ನ ನಿಯಂತ್ರಿಸೋದರ ಜೊತೆಗೆ ಗ್ಲುಕೋಸ್ ಮಟ್ಟವನ್ನ ಸರಿದೂಗಿಸುತ್ತವೆ, ಅಲ್ಲದೇ ಇವುಗಳ ಸೇವನೆಯಿಂದ ಕೊಬ್ಬಿನ ಅಂಶ ಕೂಡ ಕಡಿಮೆಯಾಗೋದ್ರಿಂದ ಹೃದಾಯಾಘಾತದ ಅಪಾಯದಿಂದ ಪಾರಾಗಬಹುದಾಗಿದೆ.
2. ಹಣ್ಣುಗಳು
ತರಕಾರಿಗಳಂತೆಯೇ ಹಣ್ಣುಗಳು ಕೂಡ ಹೃದಯದ ಆರೋಗ್ಯವನ್ನ ಕಾಪಾಡಬಲ್ಲವು. ಸೇಬು, ದ್ರಾಕ್ಷಿ, ದಾಳಿಂಬೆ, ಬ್ಲೂಬೆರ್ರಿಸ್, ಸ್ಟ್ರಾಬೆರ್ರಿ, ಅವಾಕಾಡೋಗಳಲ್ಲಿರುವ ಫೈಬರ್ ಅಂಶ, ಜೀವಸತ್ವಗಳು ದೇಹದಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ. ಅಲ್ಲದೇ ದೇಹದಲ್ಲಿ ಎಲ್ಡಿಎಲ್ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುತ್ತವೆ.
3. ಧಾನ್ಯಗಳು ಹಾಗೂ ಡ್ರೈಫ್ರೂಟ್ಸ್
ಧಾನ್ಯಗಳು ಹಾಗೂ ಡ್ರೈಫ್ರೂಟ್ಸ್ನಲ್ಲಿರುವ ವಿಟಾಮಿನ್ಗಳು ಹೃದಯದ ಆರೋಗ್ಯವನ್ನ ಸುಧಾರಿಸುತ್ತವೆ. ಶೇಂಗಾ, ಆಲ್ಮಂಡ್, ವಾಲ್ನಟ್, ಗೋಡಂಬಿ, ಬಾದಾಮಿ ಹಾಗೂ ಸಿರಿ ಧಾನ್ಯಗಳು ಹೃದಾಯಾಘಾತದ ಅಪಾಯವನ್ನ ಕಡಿಮೆ ಮಾಡುತ್ತದೆ.
4. ಚಹ
ವೈಜ್ಞಾನಿಕ ಅಧ್ಯಯನದ ಪ್ರಕಾರ ಬ್ಲ್ಯಾಕ್ ಟೀ ಹಾಗೂ ಗ್ರೀನ್ ಟೀ ರಕ್ತನಾಳಗಳಲ್ಲಿ ಉಂಟಾಗುವ ಬ್ಲಾಕ್ಗಳನ್ನ ಕಡಿಮೆ ಮಾಡುತ್ತದೆ. ಇದರಿಂದ ರಕ್ತದೊತ್ತಡ ಸುಧಾರಿಸೋದು ಮಾತ್ರವಲ್ಲದೇ ರಕ್ತ ಸಂಚಾರ ಕೂಡ ಸರಾಗವಾಗಿ ನಡೆಯಲಿದೆ.
5. ಮಸಾಲೆ ಪದಾರ್ಥ
ಭಾರತೀಯರ ಸಾಂಪ್ರದಾಯಿಕ ಅಡುಗೆಗಳಿಗೆ ಮಸಾಲೆ ಪದಾರ್ಥಗಳು ಬೇಕೆ ಬೇಕು. ಅದರಲ್ಲೂ ಅರಿಶಿಣ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕಾಳು ಮೆಣಸು, ಕೊತ್ತಂಬರಿ ಆಕ್ಸಿಡೇಟಿವ್ ಒತ್ತಡವನ್ನ ಕಡಿಮೆ ಮಾಡುತ್ತದೆ. ಅಲ್ಲದೇ ದೇಹದಲ್ಲಿರುವ ಕೆಟ್ಟ ಕೊಬ್ಬನ್ನ ಕಡಿಮೆ ಮಾಡುತ್ತದೆ ಹಾಗೂ ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತೆ.