ಫ್ಯಾಷನ್ ಮನುಷ್ಯನಲ್ಲಿರುವ ಕಲಾತ್ಮಕ ಗುಣ. ಈ ಫ್ಯಾಷನ್ ಲೋಕದಲ್ಲಿ ಡಿಸೈನಿಂಗ್ ಬಹು ದೊಡ್ಡ ಪಾತ್ರ ವಹಿಸುತ್ತದೆ. ಉಡುಗೆ ತೊಡುಗೆ, ಆಭರಣಗಳಲ್ಲಿ ಹೊಸ ಡಿಸೈನ್ ನ ಟಚ್ ಇದ್ದೇ ಇರುತ್ತದೆ. ಅಂತಹುದೇ ಈಗ ಹೊಸ ಟ್ರೆಂಡ್ ನಲ್ಲಿರುವ ಆಭರಣವೆಂದರೆ “ಸಿಲ್ಕ್ ಥ್ರೆಡ್ ಜುವೆಲರಿ”.
ಪ್ಲಾಸ್ಟಿಕ್ ಬಳೆಗಳಿಗೆ ದಾರ ಸುತ್ತಿ ಕಣ್ಮನ ಸೆಳೆಯುವಂತೆ ಮಾಡಲಾಗುತ್ತದೆ. ವಿಭಿನ್ನ ಉಡುಪುಗಳಿಗೆ ತಕ್ಕಂತೆ ಮ್ಯಾಚಿಂಗ್ ಮ್ಯಾಚಿಂಗ್ ಜುವೆಲರಿ ಸೆಟ್ ಗಳನ್ನು ಧರಿಸಬಹುದು.
ಆಕರ್ಷಿಸುವ ಹರಳು, ಕುಂದನ್, ಸಣ್ಣ ಬಿಲ್ಲೆ, ಲೇಸು, ಮಣಿಗಳಿಂದ ಅಲಂಕರಿಸಲಾಗುತ್ತದೆ. ಆಸಕ್ತಿಯಿದ್ದರೆ ತಮ್ಮದೇ ಸ್ವಂತ ಡಿಸೈನ್ ಅನುಸರಿಸಿ ಮನೆಯಲ್ಲೇ ಸ್ವತಃ ತಾವೇ ತಯಾರಿಸಿಕೊಳ್ಳಬಹುದು. ಟ್ರೆಂಡ್ ನಲ್ಲಿರುವ ಈ ಜುವೆಲರಿಯನ್ನು ನಾವೇ ರೆಡಿ ಮಾಡಿ ಧರಿಸಿದ್ರೆ, ಸಿಗೋ ಖುಷಿಯೇ ಬೇರೆ.