ನೀವು ಮೆಚ್ಚಿದ ಹುಡುಗಿಗೆ ಕಷ್ಟಪಟ್ಟು ಪ್ರೇಮ ನಿವೇದನೆ ಮಾಡ್ತೀರಾ. ಆಕೆ ನಿಮ್ಮ ಪ್ರೀತಿಯನ್ನು ಒಪ್ಪಿಯೂಕೊಳ್ತಾಳೆ ಎಂದುಕೊಳ್ಳಿ. ಆ ನಂತ್ರ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಒಂದೊಳ್ಳೆ ಸಂಬಂಧ ನೀವು ಆಡುವ ಮಾತಿನಿಂದ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಹುಡುಗಿಯರಿಗೆ ಕೆಲವೊಂದು ಮಾತುಗಳು ಇಷ್ಟವಾಗುವುದಿಲ್ಲ. ಅದರಲ್ಲೂ ಅವರಿಗೆ ಆಪ್ತರಾಗಿರುವವರು ಇಂತ ಪ್ರಶ್ನೆ ಕೇಳಿದ್ರೆ ಸಿಟ್ಟು ಬರುವ ಜೊತೆಗೆ ಸಂಬಂಧ ಕಡಿದು ಹೋಗಬಹುದು. ಹಾಗಾಗಿ ನಿಮ್ಮ ಹುಡುಗಿ ಜೊತೆ ಮಾತನಾಡುವಾಗ ಎಚ್ಚರವಿರಲಿ. ಕೆಲವೊಂದು ಪ್ರಶ್ನೆಗಳನ್ನು ಎಂದಿಗೂ ಕೇಳಲು ಹೋಗಬೇಡಿ.
ನಿಮ್ಮ ಸಂಗಾತಿ ಜೊತೆ ಯೋಚಿಸಿ ಮಾತನಾಡುವುದು ಒಳ್ಳೆಯದು. ಕೆಲವೊಮ್ಮೆ ಕ್ಷುಲ್ಲಕ ಪ್ರಶ್ನೆ, ಸಂಬಂಧವನ್ನು ಹಾಳು ಮಾಡುತ್ತದೆ. ನಿನ್ನ ಗಂಡನಾಗುವವನು ಹೇಗಿರಬೇಕೆಂದು ಕೆಲ ಹುಡುಗರು ಹುಡುಗಿ ಮುಂದೆ ಪ್ರಶ್ನೆ ಇಡ್ತಾರೆ. ಆದ್ರೆ ಅನೇಕ ಹುಡುಗಿಯರಿಗೆ ಇಂತಹ ಪ್ರಶ್ನೆ ಇಷ್ಟವಾಗುವುದಿಲ್ಲ ಎನ್ನುವುದು ನೆನಪಿರಲಿ.
ಪ್ರತಿಯೊಬ್ಬ ಹುಡುಗನೂ ಈ ಪ್ರಶ್ನೆಗೆ ಉತ್ತರ ಪಡೆಯಲು ಕಾತರನಾಗಿರ್ತಾನೆ. ನೀನು ವರ್ಜಿನ್ನಾ? ಈ ಪ್ರಶ್ನೆ ಕೇಳಿದ್ರೆ ಹುಡುಗಿ ಮುಖಭಾವ ತಕ್ಷಣ ಬದಲಾಗೋದು ಗ್ಯಾರಂಟಿ. ಹುಡುಗಿಯರೂ ಸಾಮಾನ್ಯವಾಗಿ ಎಂದೂ ಈ ಪ್ರಶ್ನೆಗೆ ಉತ್ತರ ನೀಡಲು ಬಯಸುವುದಿಲ್ಲ.
ಇದು ಆನ್ಲೈನ್ ಯುಗ. ಎಲ್ಲರೂ ಫೇಸ್ಬುಕ್ ನಲ್ಲಿದ್ದೇ ಇರ್ತಾರೆ. ಫೇಸ್ಬುಕ್ ಅಕೌಂಟ್ ಓಪನ್ ಆದ್ಮೇಲೆ ಫ್ರೆಂಡ್ಸ್ ಇದ್ದೇ ಇರ್ತಾರೆ. ಫೇಸ್ಬುಕ್ ನಲ್ಲಿ ನಿನಗೆಷ್ಟು ಬಾಯ್ ಫ್ರೆಂಡ್ಸ್ ಇದ್ದಾರೆ ಅಂತಾ ಅಪ್ಪಿತಪ್ಪಿಯೂ ಕೇಳಬೇಡಿ.