ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಅತ್ಯಂತ ಮಧುರ ಕ್ಷಣ. ಒಂಬತ್ತು ತಿಂಗಳು ಕಾಲ ಗರ್ಭದಲ್ಲಿ ಮಗುವನ್ನು ಹೊತ್ತ ಮಹಿಳೆ ಅದು ಹೊರಬಂದ ತಕ್ಷಣ ಭಾವುಕಳಾಗುತ್ತಾಳೆ. ಸಾರ್ಥಕ ಭಾವನೆಯನ್ನು ಅನುಭವಿಸುತ್ತಾಳೆ. ತಂದೆಯೂ ಸಹ ಈ ಕ್ಷಣಗಳನ್ನು ಸಂಭ್ರಮಿಸುತ್ತಾನೆ.
ಈ ಕ್ಷಣಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಮಗು ಹುಟ್ಟಿದ ತಕ್ಷಣ ಕೈ ಕಾಲು ಆಡಿಸುವುದಕ್ಕೆ ಒಂದಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಎಲ್ಲರನ್ನೂ ಭಾವುಕರನ್ನಾಗಿಸಿದೆ.
ಹೌದು, ಆಗಷ್ಟೇ ಜನಿಸಿದ ಮಗುವೊಂದು ತನ್ನ ತಾಯಿಯನ್ನು ಅಪ್ಪಿ ಹಿಡಿದಿದ್ದು, ಈ ಸಾರ್ಥಕ ಕ್ಷಣಗಳನ್ನು ಮಗುವಿನ ತಾಯಿ ಕೂಡಾ ಆನಂದಿಸಿದ್ದಾರೆ. ಮಗು ಅಳುತ್ತಿದ್ದರೂ ಸಹ ತಾಯಿಯನ್ನು ಬಿಡಲೊಲ್ಲದು. ಈ ವಿಡಿಯೋವನ್ನು @TheFigen ಎಂಬ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಲಾಗಿದ್ದು 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಅಲ್ಲದೆ 16,000ಕ್ಕೂ ಅಧಿಕ ಮಂದಿ ಇದನ್ನು ಲೈಕ್ ಮಾಡಿದ್ದಾರೆ.
ಈ ವಿಡಿಯೋ ನೋಡಿ ಕಮೆಂಟ್ ಮಾಡುತ್ತಿರುವ ನೆಟ್ಟಿಗರು, ನಿಜಕ್ಕೂ ಇದು ಅತ್ಯಂತ ಮಧುರ ಕ್ಷಣ ಎಂದು ಉದ್ಘರಿಸಿದ್ದಾರೆ. ಭೂಮಿಗೆ ಬಂದ ತಕ್ಷಣವೇ ಮಗು ಮೊದಲು ನೋಡುವುದು ತನ್ನ ತಾಯಿಯನ್ನೇ. ಅಲ್ಲದೆ ತಂದೆ – ತಾಯಿಯ ಸಾನಿಧ್ಯದಲ್ಲಿ ಮಕ್ಕಳು ಸುರಕ್ಷತಾ ಭಾವವನ್ನು ಹೊಂದುತ್ತಾರೆ. ಈ ಮಗು ಹುಟ್ಟಿದ ತಕ್ಷಣ ಅದನ್ನು ಬಿಂಬಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
https://twitter.com/TheFigen_/status/1639385250051633153?ref_src=twsrc%5Etfw%7Ctwcamp%5Etweetembed%7Ctwterm%5E1639385250051633153%7Ctwgr%5E754671cda59127e370a1612d104b794c2053c0dd%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fhindi%2Ftv9bharatvarsh-epaper-dh6d40cdb28e0940909294626070923044%2Fpaidahotehimaselipatgayabacchachodanekotaiyarnahivideodekhloghueimoshanal-newsid-n483965602