ನಗರ್ತಿ: ಹಾಸನ ಜೆಡಿಎಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮೌನ ವಹಿಸಲು ನಿರ್ಧರಿಸಿದಂತಿದೆ. ಸುದ್ದಿಗಾರರೊಂದಿಗೆ ಮಾತಾನಾಡಿದ ಕುಮಾರಸ್ವಾಮಿ, ಮುಂದೆ ಮಾತನಾಡೋಣ ಎಂದು ಹೇಳಿ ನುಣುಚಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಅರಸಿಕೆಯ ನಗರ್ತಿಯಲ್ಲಿ ಈಶ್ವರ ಭೈರವದೇವಸ್ಥಾನ ಉದ್ಘಾಟಿಸಿದ ಬಳಿಕ ಹಾಸನ ಟಿಕೆಟ್ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ. ಮುಂದೆ ನೋಡೋಣ ಎಂದು ಹೇಳಿದ್ದಾರೆ.
ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್.ಡಿ. ರೇವಣ್ಣ ಕುಟುಂಬ ಕುಡ ಭಾಗಿಯಾಗಿತ್ತು. ಒಟ್ಟಾರೆ ಹಾಸನ ಜೆಡಿಎಸ್ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬದ ನಡೆ ಕುತೂಹಲ ಮೂಡಿಸಿದೆ.