ಹಾವೆಂದರೆ ಯಾರಿಗೆ ತಾನೆ ಭಯವಾಗೋಲಗಲ ಹೇಳಿ…..? ಹೆಸರು ಕೇಳಿದರೆನೆ ಮೈ ನಡುಕ ಬರುತ್ತದೆ. ಕೆಲವೊಂದು ಹಾವುಗಳು ವಿಷಪೂರಿತ ಆಗಿರುವುದರಿಂದ ಭಯವಾಗುವುದು ಸಾಮಾನ್ಯ. ಇವು ಕೆಲವೊಮ್ಮೆ ಮನೆ ಹತ್ತಿರ ಬರುವುದು ಉಂಟು. ಹಾವುಗಳು ಮನೆ ಹತ್ತಿರ ಬರದ ಹಾಗೆ ಮಾಡಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ಲೆಮನ್ ಗ್ರಾಸ್ (ಲಿಂಬೆ ಹುಲ್ಲು) ಇದನ್ನು ಟೀ ಗೆ ಬಳಸುವುದು ನಿಮಗೆ ಗೊತ್ತಿರಬಹುದು. ಇದೇ ಲೆಮನ್ ಗ್ರಾಸ್ ನಿಂದ ಹಾವುಗಳು ಕೂಡ ಮನೆ ಹತ್ತಿರ ಬರುವುದಿಲ್ಲವಂತೆ. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇವುಗಳನ್ನು ಮನೆ ಸುತ್ತಮುತ್ತ ಬೆಳೆಯುವುದರಿಂದ ಕೀಟಗಳು, ಹಾವುಗಳ ಹಾವಳಿ ಕಮ್ಮಿಯಾಗುತ್ತದೆಯಂತೆ.
ಬೆಳ್ಳುಳ್ಳಿ ಕೂಡ ಇಂತಹ ಸರಿಸೃಪಗಳನ್ನು ಮನೆಯಿಂದ ದೂರವಿಡುವುದಕ್ಕೆ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಸಲ್ಫೊನಿಕ್ ಎಂಬ ಆ್ಯಸಿಡ್ ಇರುತ್ತದೆ. ಈ ಕಾರಣಕ್ಕೆ ಹಾವುಗಳು ಹತ್ತಿರ ಬರುವುದಿಲ್ಲ. ಕಿಟಕಿ, ಬಾಗಿಲಿನ ಸಂಧಿ, ಗಾರ್ಡನಿಂಗ್ ಜಾಗದಲ್ಲಿ ಬೆಳ್ಳುಳ್ಳಿಯ ಲಿಕ್ವಿಡ್ ಅನ್ನು ಸ್ಪ್ರೆ ಮಾಡಿದರೆ ಹಾವುಗಳು ಬರುವುದಿಲ್ಲವಂತೆ,
10 ಎಸಳು ಬೆಳ್ಳುಳ್ಳಿಯನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿ ನಂತರ ಇದಕ್ಕೆ ಬೆಳ್ಳುಳ್ಳಿ ಇನ್ ಫ್ಯೂಸಡ್ ಎಣ್ಣೆ ಹಾಕಿ ಮತ್ತೊಮ್ಮೆ ಬ್ಲೆಂಡ್ ಮಾಡಿ. ನಂತರ ಇದನ್ನು ಒಂದು ಗ್ಲಾಸಿನ ಜಾರಿಗೆ ಹಾಕಿಡಿ. ಉಪಯೋಗಿಸುವ ಮೊದಲು ಮುಚ್ಚಳ ತೆಗೆದು ಒಂದು ಗಂಟೆ ಹಾಗೆಯೇ ಇಡಿ. ನಂತರ ಸ್ಪ್ರೇ ಮಾಡುವಾಗ ಉಪಯೋಗಿಸಿ.