ಮನೆಗೆ ಮಗುವಿನ ಆಗಮನವಾದಾಗ ಅದನ್ನು ನೋಡಲು ನೆಂಟರು, ಸ್ನೇಹಿತರು ಭೇಟಿ ಕೊಡುತ್ತಿರುತ್ತಾರೆ. 4-5 ತಿಂಗಳವರೆಗೆ ಮನೆಗೆ ಅತಿಥಿಗಳ ನಿರಂತರ ಭೇಟಿ ಇದ್ದೇ ಇರುತ್ತದೆ. ಹೀಗೆ ಮನೆಗೆ ಬಂದವರು ಮಕ್ಕಳನ್ನು ಎತ್ತಿ ಆಡಿಸಿ, ಮುತ್ತಿಟ್ಟು, ಕೆನ್ನೆ ಚಿವುಟುತ್ತಾ ಮಾತನಾಡಿಸುವುದು ಸಾಮಾನ್ಯ. ಆದ್ರೆ ಇಂತಹ ಸಂದರ್ಭದಲ್ಲಿ ಪೋಷಕರು ಕೆಲವೊಂದು ಅಂಶಗಳನ್ನು ಗಮನದಲ್ಲಿ ಇಡಬೇಕು.
ಹೊರಗಿನಿಂದ ಬಂದ ಅತಿಥಿಗಳು ಮೊದಲು ಕೈ ಕಾಲು ತೊಳೆಯದೆ ಮಕ್ಕಳನ್ನು ಮುಟ್ಟಲು ಬಿಡಬೇಡಿ.
ಮಕ್ಕಳ ಮುಖಕ್ಕೆ ತೀರಾ ಹತ್ತಿರ ಬಂದು ಮಾತನಾಡುವುದು ಒಳ್ಳೆಯದಲ್ಲ.
ಮಕ್ಕಳ ಮುದ್ದು ಮುಖ ಎಲ್ಲರನ್ನೂ ಸೆಳೆಯುವುದು ಸಹಜ. ಹಾಗೆಂದು ಪದೇ ಪದೇ ಕೆನ್ನೆ ಗಿಂಟುತ್ತಾ ಇದ್ದರೆ ಮಗುವಿಗೆ ಕಿರಿಕಿರಿ ಆಗಬಹುದು.
ಮಕ್ಕಳಿಗೆಂದು ಯಾರಾದರೂ ಆಟಿಕೆ ತಂದು ಕೊಟ್ಟರೆ ತಕ್ಷಣ ಅದನ್ನು ಬಿಚ್ಚಿ ಕೈಗೆ ಕೊಡಬೇಡಿ. ಸ್ವಚ್ಛಗೊಳಿಸಿ ಕೊಡಿ.