ಆಂಜನೇಯ, ಶಿವನ 11ನೇ ಅವತಾರ ಎನ್ನುತ್ತಾರೆ. ಜಗತ್ತಿನಾದ್ಯಂತ ಜನರು ಹನುಮಂತನನ್ನು ಆರಾಧಿಸ್ತಾರೆ. ಅದರಲ್ಲೂ ಮಂಗಳವಾರ ಆಂಜನೇಯನನ್ನು ಪೂಜಿಸಿದರೆ ಶ್ರೇಷ್ಠ ಅನ್ನೋ ನಂಬಿಕೆ ಇದೆ. ಹನುಮಂತನ ವಿವಿಧ ರೂಪಗಳನ್ನು ಆರಾಧಿಸುವುದರಿಂದ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತದೆ.
ಜ್ಯೋತಿಷ್ಯದ ಪ್ರಕಾರ ಮಂಗಳವಾರ, ಕೆಂಪು ಗ್ರಹ ಮಂಗಳನಿಗೆ ಸೇರಿದ್ದು. ಶೌರ್ಯ, ಧೈರ್ಯ ಮತ್ತು ನಿರ್ಭಯತೆಯ ಸಂಕೇತ ಮಂಗಳ ಗ್ರಹ. ಆಂಜನೇಯ ಕೂಡ ಕೆಂಪು ಸಿಂಧೂರವನ್ನಿಟ್ಟುಕೊಳ್ಳುತ್ತಾನೆ, ಮೇಲಿನ ಎಲ್ಲಾ ಗುಣಗಳೂ ಅವನಲ್ಲಿವೆ. ಹಾಗಾಗಿ ಹನುಮಂತನಿಗೂ ಮಂಗಳವಾರಕ್ಕೂ ತಾರ್ಕಿಕ ಸಂಬಂಧವಿದೆ.
ಪಾದಸ್ಪರ್ಷಿ ಹನುಮಾನ್ : ಇಲ್ಲಿ ಹನುಮಂತ ರಾಮನ ಪಾದ ಸ್ಪರ್ಷಿಸಿ ಆಶೀರ್ವಾದ ಪಡೆಯುತ್ತಾನೆ. ಪಾದಸ್ಪರ್ಷಿ ಹನುಮಂತನನ್ನು ಪೂಜಿಸಿದ್ರೆ ನಿಮ್ಮ ವೈಯಕ್ತಿಕ ಬದುಕು ಮತ್ತು ಉದ್ಯೋಗದಲ್ಲಿನ ಎಲ್ಲಾ ಸಮಸ್ಯೆಗಳೂ ನಿವಾರಣೆಯಾಗುತ್ತವೆ.
ಸೂರ್ಯಮುಖಿ ಹನುಮಾನ್ : ಸೂರ್ಯನ ಕಿರಣಗಳು ಜ್ಞಾನ ಮತ್ತು ವಿವೇಕದ ಸಂಕೇತ. ಈ ರೂಪದಲ್ಲಿ ಹನುಮಂತ ಸೂರ್ಯನನ್ನು ಆರಾಧಿಸುತ್ತಾನೆ. ಸೂರ್ಯಮುಖಿ ಆಂಜನೇಯನನ್ನು ಪೂಜಿಸುವುದರಿಂದ ನಿಮಗೆ ಯಶಸ್ಸು ಮತ್ತು ಬುದ್ಧಿವಂತಿಕೆ ಎರಡೂ ಲಭಿಸುತ್ತದೆ.
ಮಹಾಬಲಿ ಹನುಮಾನ್ : ಈ ರೂಪದಲ್ಲಿ ಆಂಜನೇಯ ಅತ್ಯಂತ ಶಕ್ತಿಶಾಲಿಯೂ, ಭಯರಹಿತನೂ ಹಾಗೂ ಯೋಧನೂ ಆಗಿರ್ತಾನೆ. ಲಂಕೆಯ ರಾಕ್ಷಸರನ್ನೆಲ್ಲ ಸಂಹರಿಸುತ್ತಾನೆ. ಮಹಾಬಲಿ ಹನುಮಾನ್ ನನ್ನು ಆರಾಧಿಸಿದರೆ ನಿಮ್ಮಲ್ಲಿರುವ ಭಯ ತೊಲಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಭಕ್ತ ಹನುಮಾನ್ : ಈ ರೂಪದಲ್ಲಿ ಹನುಮಂತ ರಾಮನನ್ನು ಪೂಜಿಸುತ್ತಾನೆ. ಭಕ್ತ ಹನುಮಾನ್ ನನ್ನು ಆರಾಧಿಸುವುದರಿಂದ ನೀವು ಅತಿ ಶೀಘ್ರವಾಗಿ ಬದುಕಿನ ಗುರಿ ತಲುಪಬಹುದು.
ಉತ್ತರಮುಖಿ ಹನುಮಾನ್ : ದೇವರುಗಳೆಲ್ಲ ಉತ್ತರ ದಿಕ್ಕಿನಲ್ಲಿರುತ್ತಾರೆ ಎಂಬ ನಂಬಿಕೆ ಇದೆ. ಹನುಮಂತ, ಉತ್ತರಕ್ಕೆ ಮುಖ ಮಾಡಿರುವ ಮೂರ್ತಿಯನ್ನು ಇಟ್ಟು ಪೂಜಿಸುವುದರಿಂದ ಎಲ್ಲಾ ದೇವರ ಕೃಪೆಯೂ ನಿಮಗೆ ದೊರೆಯುತ್ತದೆ.