ಮನೆಯಲ್ಲಿಯೇ ಮಾಡುವ ಆಯುರ್ವೇದ ಡ್ರಿಂಕ್ ನಿಂದ ಬೊಜ್ಜನ್ನು ಕೇವಲ 10 ದಿನಗಳಲ್ಲಿ ಕಡಿಮೆ ಮಾಡಿಕೊಳ್ಳಬಹುದು.
ಬೆಲ್ಲ ಹಾಗೂ ಅರಿಶಿನದಿಂದ ಮಾಡಿದ ಡ್ರಿಂಕ್ ಸೇವನೆ ಮಾಡುವುದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ತೂಕ ಕಡಿಮೆಯಾಗುತ್ತದೆ. ಬೊಜ್ಜು ಕರಗಿಸುವ ಡ್ರಿಂಕ್ ಮಾಡಲು ಬೇಕಾಗುವ ಪದಾರ್ಥಗಳು.
1 ಲೋಟ ಬಿಸಿನೀರು
1 ಚಮಚ ಜೇನುತುಪ್ಪ
ಅರ್ಧ ಟೀ ಚಮಚ ನಿಂಬೆ ರಸ
ಅರ್ಧ ಟೀ ಚಮಚ ಶುಂಠಿ ರಸ
ಅರ್ಧ ಟೀ ಚಮಚ ಅರಿಶಿನ ರಸ
ಬೆಳಿಗ್ಗೆ ಯೋಗ ಮಾಡುವ ಮೊದಲು ಈ ಎಲ್ಲ ವಸ್ತುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತ್ರ ಅದನ್ನು ಕುಡಿಯಿರಿ. ಯೋಗ ಮಾಡುವಾಗ ಬಾಯಾರಿಕೆಯಾದ್ರೆ ನೀವು ಈ ಪಾನೀಯವನ್ನು ಸ್ವಲ್ಪ ಸ್ವಲ್ಪ ಕುಡಿಯಬಹುದು.
ಇದ್ರಲ್ಲಿ ಬಳಸುವ ಎಲ್ಲ ವಸ್ತುಗಳು ಆರೋಗ್ಯಕ್ಕೆ ಒಳ್ಳೆಯದು.
ನಿಂಬೆಹಣ್ಣು ಆಮ್ಲೀಯ ಅಂಶಗಳ ಜೊತೆಗೆ ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್ ಅಂಶಗಳಿಂದ ಕೂಡಿದೆ. ಇದು ತೂಕ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದು ಯಕೃತ್ತನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಶುಂಠಿಯು ಉತ್ಕರ್ಷಣ ನಿರೋಧಕ ಗುಣಗಳಿಂದ ಕೂಡಿದ್ದು ಅದು ತೂಕವನ್ನು ಕಡಿಮೆ ಮಾಡಲು ಮತ್ತು ದೇಹದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ ಸೊಂಟದ ಕೊಬ್ಬು ವೇಗವಾಗಿ ಕಡಿಮೆಯಾಗುತ್ತದೆ.
ಅರಿಶಿನ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದು ಹೆಚ್ಚಿನ ಉರಿಯೂತದ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ದೇಹದ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ, ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತವೆ.
ಜೇನುತುಪ್ಪವು ಹೇರಳವಾಗಿ ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್, ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ ದೇಹದಿಂದ ವಿಷವನ್ನು ತೆಗೆದು ಹಾಕುತ್ತದೆ.