ಹತ್ತು ಸಲ ನಮಸ್ಕಾರ ಹೊಡೆದರೂ ಯಡಿಯೂರಪ್ಪ ತಿರುಗಿಯೂ ನೋಡಲಿಲ್ಲ; ಬೇಸರ ಹೊರಹಾಕಿದ ವಿ. ಸೋಮಣ್ಣ

ಮಂಗಳವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ತಮ್ಮ ಮನದಾಳದ ಮಾತುಗಳನ್ನು ಹೊರ ಹಾಕಿದ್ದ ವಸತಿ ಸಚಿವ ವಿ. ಸೋಮಣ್ಣ, ತಾವು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಪಕ್ಷ ಟಿಕೆಟ್ ನೀಡಿದರೆ ಚುನಾವಣೆಗೆ ಸ್ಪರ್ಧಿಸುತ್ತೇನೆ, ಇಲ್ಲವಾದರೆ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.

ಅಲ್ಲದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕುರಿತಂತೆ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದ ವಿ. ಸೋಮಣ್ಣ, ಯಾರ ಮುಲಾಜಿನಲ್ಲಿಯೂ ನಾನಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದು ಈ ಸ್ಥಾನಕ್ಕೆ ಏರಿದ್ದೇನೆ. ನನಗೆ ಸಿದ್ದಗಂಗಾ ಶ್ರೀಗಳು ಆದರ್ಶಪ್ರಾಯರು ಎಂದು ಹೇಳಿದ್ದರು.

ಇದೀಗ ಯಡಿಯೂರಪ್ಪನವರ ವಿರುದ್ಧದ ಅಸಮಾಧಾನವನ್ನು ಮತ್ತೆ ಮುಂದುವರಿಸಿರುವ ಸೋಮಣ್ಣ, ಯಡಿಯೂರಪ್ಪ ಹಿರಿಯರಿದ್ದಾರೆ. ಹಾಗಾಗಿ ಎದುರಿಗೆ ಸಿಕ್ಕರೆ ನಮಸ್ಕಾರ ಹೊಡೆಯುತ್ತೇನೆ. ಶಿವಮೊಗ್ಗದಲ್ಲಿ ಸಿಕ್ಕ ವೇಳೆ ಹತ್ತು ಬಾರಿ ನಮಸ್ಕಾರ ಮಾಡಿದರು ತಿರುಗಿಯೂ ನೋಡಲಿಲ್ಲ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read