ಸ್ವೀಟ್ ಕಾರ್ನ್ ಮತ್ತು ಮೆಕ್ಕೆ ಜೋಳದ ಹೆಸರು ಕೇಳಿದ್ರೆ ಮಳೆಗಾಲದಲ್ಲಿ ಬಾಯಲ್ಲಿ ನೀರು ಬರುತ್ತೆ. ಇವೆರಡು ತಮ್ಮದೇ ರುಚಿ ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಮೆಕ್ಕೆ ಜೋಳಕ್ಕಿಂತ ಸ್ವೀಟ್ ಕಾರ್ನ್ ಗೆ ಬೇಡಿಕೆ ಹೆಚ್ಚಿದೆ. ಆದ್ರೆ ಇವೆರಡರಲ್ಲಿ ಯಾವುದು ಬೆಸ್ಟ್ ಎಂಬ ಪ್ರಶ್ನೆ ಕಾಡುವುದು ಸಾಮಾನ್ಯ.
ಮೊದಲಿಗೆ, ಸ್ವೀಟ್ ಕಾರ್ನ್ ಮತ್ತು ಹುರಿದ ಮೆಕ್ಕೆ ಜೋಳದ ನಡುವಿನ ವ್ಯತ್ಯಾಸವೇನು ಎಂಬುದನ್ನು ತಿಳಿಯಬೇಕು. ತಜ್ಞರ ಪ್ರಕಾರ, ಸ್ವೀಟ್ ಕಾರ್ನ್, ವಿದೇಶಗಳಿಂದ ಆಮದು ಮಾಡಿರುವಂತಹ ಹೈಬ್ರಿಡ್ ಬೀಜಗಳಿಂದ ಬೆಳೆಯಲಾಗುತ್ತದೆ. ಇದರಲ್ಲಿ ಅಂದುಕೊಳ್ಳುವಷ್ಟು ಪೊಷಕಾಂಶಗಳು ಇರುವುದಿಲ್ಲ. ಬದಲಾಗಿ ಇದರಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ ಇರುತ್ತೆ. ಇದನ್ನು ಬೆಳೆಸಲು ಹೆಚ್ಚಿನ ಪ್ರಮಾಣದ ಕೀಟನಾಶಕಗಳನ್ನು ಬಳಸಲಾಗುತ್ತದೆ. ಜೊತೆಗೆ ಇದರಲ್ಲಿ ನಾರಿನ ಪ್ರಮಾಣವೂ ತುಂಬಾ ಕಡಿಮೆ.
ದೇಸಿ ಮುಸುಕಿನ ಜೋಳದಲ್ಲಿ ಏನಿಲ್ಲವೆಂದ್ರೂ 3000 ಕ್ಕೂ ಹೆಚ್ಚು ಬಗೆಯ ಪ್ರಭೇದಗಳಿವೆ. ಇದನ್ನು ಬೆಳೆಯಲು ನೀರು ಮತ್ತು ಗೊಬ್ಬರವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕೀಟನಾಶಕಗಳನ್ನು ಸಹ ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ. ಸ್ಥಳೀಯ ಮೆಕ್ಕೆ ಜೋಳಗಳಲ್ಲಿ ಸಕ್ಕರೆಯ ಪ್ರಮಾಣ ಅಷ್ಟಾಗಿ ಇಲ್ಲ. ಇದ್ದರೂ ಅದು ಪಿಷ್ಟವಾಗಿ ಬದಲಾಗುತ್ತದೆ. ಆದ್ದರಿಂದ ಇದು ಆರೋಗ್ಯಕ್ಕೆ ಒಳ್ಳೆಯದಾಗಿದೆ. ಮೆಕ್ಕೆ ಜೋಳದಲ್ಲಿ ಅಧಿಕ ಫೈಬರ್ ಅಂಶವಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿಯಂತ್ರಿಸುತ್ತದೆ. ಜೊತೆಗೆ ನಿಮ್ಮ ಜೀರ್ಣಾಂಗವನ್ನ ಕೂಡಾ ಉತ್ತಮ ಸ್ಥಿತಿಯಲ್ಲಿರಿಸುತ್ತದೆ.