alex Certify ಸೋದರಳಿಯನ ಜೊತೆ ಮೊದಲ ಬಾರಿಗೆ ಸದನ ಪ್ರವೇಶಿಸಿದ ಮಾವ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋದರಳಿಯನ ಜೊತೆ ಮೊದಲ ಬಾರಿಗೆ ಸದನ ಪ್ರವೇಶಿಸಿದ ಮಾವ…..!

madhu bangarappa, ಕುಮಾರ್‌ ಬಂಗಾರಪ್ಪನ ರಾಜಕೀಯ ಪಿಕ್ಚರ್‌ ಕೊನೆಗೊಳ್ಳಲಿದೆ: ಮಧು ಬಂಗಾರಪ್ಪ ವಾಗ್ದಾಳಿ - congress leader madhu bangarappa slams kumar bangarappa - Vijaya Karnataka

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಭರ್ಜರಿ ಜಯಸಾಧಿಸಿದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಸಜ್ಜಾಗಿದೆ. ಈ ಬಾರಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಬಹುತೇಕ ಅಪ್ಪ – ಮಕ್ಕಳ ಜೋಡಿ ಜಯ ಸಾಧಿಸಲು ಯಶಸ್ವಿಯಾಗಿದ್ದು, ಇದರ ಜೊತೆಗೆ ಅಳಿಯ – ಮಾವ ಒಟ್ಟಿಗೆ ಸದನ ಪ್ರವೇಶಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ, ತಮ್ಮ ಸಹೋದರ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಅವರನ್ನು ಪರಾಭವಗೊಳಿಸಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಇನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಅವರ ಮಾವ ಅಂದರೆ ತಾಯಿಯ ಸಹೋದರ ಭೀಮಣ್ಣ ನಾಯ್ಕ್ ಸತತ ಸೋಲಿನ ನಂತರ ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿದ್ದು, ಸೋದರಳಿಯನ ಜೊತೆ ಸದನ ಪ್ರವೇಶಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...