
ಸೇಬು ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ದಿನಕ್ಕೆ ಒಂದು ಸೇಬು ಸೇವಿಸಿದರೆ ವೈದ್ಯರಿಂದ ದೂರವಿರಬಹುದು ಎಂದು ಹೇಳುತ್ತಾರೆ. ಹಾಗೇ ಇದು ಚರ್ಮಕ್ಕೂ ಕೂಡ ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು.
*ತುರಿದ ಒಂದು ಸೇಬು ಹಣ್ಣಿನ ಜೊತೆ 1ಚಮಚ ಮೊಸರು ಮತ್ತು ನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಒಣಗಲು ಬಿಡಿ. ಬಳಿಕ ಅದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನು ವಾರಕ್ಕೆರಡು ಬಾರಿ ಬಳಸಿ. ಇದರಿಂದ ಮುಖದ ಮೇಲೆ ಹೆಚ್ಚು ತೈಲ ಉತ್ಪತ್ತಿಯಾಗುವುದು ಕಡಿಮೆಯಾಗುತ್ತದೆ. ಇದರಿಂದ ಗುಳ್ಳೆ ಮತ್ತು ಮೊಡವೆಗಳಿಂದ ಮುಕ್ತಿ ಹೊಂದಬಹುದು.
*ಒಂದು ತುರಿದ ಸೇಬು ಹಣ್ಣಿಗೆ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 25 ನಿಮಿಷ ಬಿಟ್ಟು ವಾಶ್ ಮಾಡಿ . ಇದನ್ನು ವಾರದಲ್ಲಿ ಒಮ್ಮೆ ಮಾಡಿ. ಇದರಿಂದ ಮುಖದ ಚರ್ಮ ಹೈಡ್ರೀಕರಣಗೊಂಡು ತೇವಾಂಶ ಒಳಗಿನಿಂದ ಲಾಕ್ ಆಗುತ್ತದೆ. ಹೊರಗಡೆಯಲ್ಲಿ ನಿಮ್ಮ ಮುಖ ಸುಂದರವಾಗಿ ಕಾಣುತ್ತದೆ.