1 ಕಪ್- ಹುಳಿ ಮೊಸರು, 2 ಕಪ್-ನೀರು, 4 ಟೇಬಲ್ ಸ್ಪೂನ್-ಕಡಲೆಹಿಟ್ಟು, ½ ಟೀ ಸ್ಪೂನ್-ಅರಿಶಿನ, ಉಪ್ಪು-ರುಚಿಗೆ ತಕ್ಕಷ್ಟು, 2 ಟೇಬಲ್ ಸ್ಪೂನ್-ತುಪ್ಪ, ½ ಟೀ ಸ್ಪೂನ್-ಸಾಸಿವೆ, ¼ ಟೀ ಸ್ಪೂನ್-ಮೆಂತೆಕಾಳು, ½ ಟೀ ಸ್ಪೂನ್-ಜೀರಿಗೆ, 1-ಪಲಾವ್ ಎಲೆ, ಚಿಟಿಕೆ-ಇಂಗು, ½ ಟೀ ಸ್ಪೂನ್- ಖಾರದಪುಡಿ, 2 ಒಣಮೆಣಸು.
ಮಾಡುವ ವಿಧಾನ:
ಒಂದು ಬೌಲ್ ಗೆ ಮೊಸರು, ನೀರು, ಕಡಲೆಹಿಟ್ಟು, ಅರಿಶಿನ, ಉಪ್ಪು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಗ್ಯಾಸ್ ನಲ್ಲಿ 15 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ತಳ ಹತ್ತದಂತೆ ಆಗಾಗ ಕೈಯಾಡಿಸುತ್ತಾ ಇರಿ. ಇದು ತುಂಬಾ ದಪ್ಪಗಾಗದಂತೆ ನೋಡಿಕೊಳ್ಳಿ.
ನಂತರ ಒಂದು ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಪಲಾವ್ ಎಲೆ, ಮೆಂತೆಕಾಳು, ಜೀರಿಗೆ, ಇಂಗು, ಖಾರದಪುಡಿ, ಒಣಮೆಣಸು ಹಾಕಿ. ಅದು ಬಿಸಿಯಾಗುತ್ತಲೆ ಈ ಒಗ್ಗರಣೆಯನ್ನು ಕಡಲೆಹಿಟ್ಟಿನ ಮಿಶ್ರಣಕ್ಕೆ ಹಾಕಿ. ಚೆನ್ನಾಗಿ ತಿರುವಿ. ಇದು ಬಿಸಿ ಅನ್ನಕ್ಕೆ, ಚಪಾತಿ ಜತೆ ತುಂಬಾ ಚೆನ್ನಾಗಿರುತ್ತದೆ.