ಇದೊಂದು ಉತ್ತರ ಭಾರತೀಯ ಶೈಲಿಯ ತಿನಿಸಾಗಿದ್ದು, ಸುಲಭವಾಗಿ ತಯರಿಸಲಾಗುವ ಮತ್ತು ಸ್ವಾದಿಷ್ಟ ರುಚಿಯನ್ನ ಹೊಂದಿರುವ ಸ್ನಾಕ್ಸ್ ಆಗಿದೆ. ದಿಢೀರ್ ಅಂತ ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದಲ್ಲಿ ಏನಾಪ್ಪಾ ಮಾಡೋದು ಅಂತ ಯೋಚ್ನೆ ಮಾಡ್ಬೇಡಿ. ಈ ವಿಶಿಷ್ಟವಾದ ತಿನಿಸನ್ನು ಮಾಡಿಕೊಟ್ಟು ಅವರ ಪ್ರಶಂಸೆಗೆ ಪಾತ್ರರಾಗಿ.
ಬೇಕಾಗಿರುವ ಪದಾರ್ಥಗಳು :
ಕಳ್ಳೇ ಪುರಿ : 1 ಲೀಟರ್
ಹುರಿದ ಶೇಂಗಾ ಬೀಜ : 100 ಗ್ರಾಂ
ಶೇವು : 100 ಗ್ರಾಂ
ಸಣ್ಣಗೆ ಹೆಚ್ಚಿಕೊಂಡಿರುವ ಈರುಳ್ಳಿ : 1 ಕಪ್
ದಾಳಿಂಬೆ : ಸ್ವಲ್ಪ
ಕೊತ್ತಂಬರಿ ಸೊಪ್ಪು : ಸ್ವಲ್ಪ
ಹಸಿರು ಚಟ್ನಿ (ಪುದೀನ + ಕೊತ್ತಂಬರಿ ಸೊಪ್ಪು+ ಹಸಿಮೆಣಸಿನಕಾಯಿ) : 1 ಟೀ ಚಮಚ
ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ : 2
ಟೊಮೆಟೊ : 1 ಕಪ್
ನಿಂಬೆ ರಸ : 2 ಟೀ ಚಮಚ
ಚಾಟ್ ಮಸಾಲಾ : 2 ಟೀ ಚಮಚ
ಮಾಡುವ ವಿಧಾನ : ಒಂದು ದಪ್ಪ ತಳದ ಬಾಣಲೆಯಲ್ಲಿ ಮೇಲೆ ಹೇಳಲಾಗಿರುವ ಕಳ್ಳೇ ಪುರಿ, ಶೇಂಗಾ ಬೀಜ, ದಾಳಿಂಬೆ, ಕತ್ತರಿಸಿದ ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಬೆರೆಸಿ.
ನಂತರ ಇದಕ್ಕೆ ಚಾಟ್ ಮಸಾಲಾ, ಹಸಿಮೆಣಸಿನಕಾಯಿ ಮತ್ತು ಹಸಿರು ಚಟ್ನಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ನಿಂಬೆ ರಸವನ್ನು ಸೇರಿಸಿ , ಇದರ ಮೇಲೆ ಶೇವು ಅನ್ನು ಸಿಂಪಡಿಸಿದರೆ ಬಾಯಲ್ಲಿ ನೀರೂರಿಸುವ ಸ್ಪೆಷಲ್ ಬೇಲ್ ಸವಿಯಲು ಸಿದ್ದ.