ವಿಧಾನಸಭೆ ಚುನಾವಣೆ ಮತದಾನ ನಾಳೆ ನಡೆಯಲಿದ್ದು, ಸುಗಮವಾಗಿ ಚುನಾವಣೆ ನಡೆಸಲು ಆಯೋಗದಿಂದ ಕ್ರಮ ಕೈಗೊಳ್ಳಲಾಗಿದೆ. ಮತದಾನ ಹೆಚ್ಚಳಕ್ಕೆ ಹಿಂದಿನಿಂದಲೂ ಕ್ರಮ ಕೈಗೊಂಡಿದ್ದ ಚುನಾವಣಾ ಆಯೋಗ ವಿಶೇಷ ಥೀಮ್‌ನ ಮತಗಟ್ಟೆಗಳನ್ನು ಸಿದ್ದಪಡಿಸಿದೆ.
ಚುನವಣಾ ಕರ್ತವ್ಯಕ್ಕೆ ಸಾರಿಗೆ ಬಸ್‌ಗಳನ್ನು ಬಳಸಿಕೊಳ್ಳುವುದರಿಂದ ಇಂದು ಮತ್ತು ನಾಳೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳು ಸೇರಿದಂತೆ ಎಲ್ಲಾ ಕಡೆಗಳಲ್ಲೂ ಪೊಲೀಸ್ ಇಲಾಖೆ, ಅರೆಸೇನಾ ಪಡೆ ಬಿಗಿ ಭದ್ರತೆ ಕೈಗೊಂಡಿದೆ. ಮತಗಟ್ಟೆಯಲ್ಲಿ ನೆರಳು, ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ವ್ಹೀಲ್ ಚೇರ್ ಮೊದಲಾದ ಸೌಲಭ್ಯ ಕಲ್ಪಿಸಲಾಗಿದೆ.
ಅಂಧ ಮತದಾರರಿಗೆ ಅನುಕೂಲವಾಗುವಂತೆ ಬ್ರೈಲ್ ಮಾದರಿ ಮತಪತ್ರಗಳನ್ನು ಇರಿಸಲಾಗಿದ್ದು, ಮಾದರಿ ಬ್ರೈಲ್ ಮತಪತ್ರದೊಂದಿಗೆ ಮತ ಚಲಾಯಿಸಬಹುದು.
ಈಗಾಗಲೇ 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆಗಳಿಗೆ ತೆರಳಿ ಮತಹಾಕಿಸಲಾಗಿದೆ. ಅದರಂತೆ ಸಖಿ, ವಿಕಲಚೇತನ, ಯುವ ಮತದಾರರು ಹಾಗೂ ಎಥ್ನಿಕ್ ಬೂತ್‌ಗಳನ್ನು ತೆರೆದು ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೋ ಅಲ್ಲಿ ಪಿಂಕ್ ಬೂತ್ ಅಥವಾ ಸಖಿ ಬೂತ್ ತೆರೆಯಲಾಗಿದೆ. ಪ್ರತಿ ಕ್ಷೇತ್ರದಲ್ಲೂ ಸಖಿ ಬೂತ್ ತೆರೆಯಲಾಗಿದೆ. ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ಮೈಕ್ರೋ ಅಬ್ಸರ್ವರ್‌ಗಳ ನೇಮಕ ಮಾಡಲಾಗಿದ್ದು. ಒಟ್ಟಿನಲ್ಲಿ ಯಾವುದೇ ಲೋಪವಾಗದೆ ಸುಗಮ ಮತದಾನ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.