alex Certify ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ….? ಹಾಗಿದ್ರೆ ಇದನ್ನೆಲ್ಲ ಮಿಸ್ ಮಾಡ್ದೇ ತಿನ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ….? ಹಾಗಿದ್ರೆ ಇದನ್ನೆಲ್ಲ ಮಿಸ್ ಮಾಡ್ದೇ ತಿನ್ನಿ

ನೀವು ಪಕ್ಕಾ ಸಸ್ಯಹಾರಿನಾ? ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ? ಅದರ ಜೊತೆಜೊತೆಗೆ ಫಿಟ್ & ಫೈನ್ ಆಗಿರಬೇಕು ಅನ್ನೋದು ನಿಮ್ಮ ಆಸೆಯಾಗಿದ್ರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಸ್ನಾಯುಗಳನ್ನು ಗಟ್ಟಿ ಮಾಡುವಂತಹ ಡಯಟ್ ಇದೆ. ಈ ಡಯಟ್ ಪೋಷಕಾಂಶಗಳ ಆಗರ ಮತ್ತು ಇದರಿಂದ ನಿಮ್ಮ ಸ್ನಾಯುಗಳು ಗಟ್ಟಿಮುಟ್ಟಾಗಲಿವೆ. ಆ ತರಕಾರಿಗಳು ಯಾವುವು ಅನ್ನೋದನ್ನ ನೋಡೋಣ.

ಪಾಲಕ್ ಸೊಪ್ಪು : ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದೆ. ಪಾಲಕ್ ಸೊಪ್ಪು ಬ್ಲಡ್ ಕೌಂಟನ್ನು ಸುಧಾರಿಸುತ್ತದೆ. ಒಂದು ಕಪ್ ಪಾಲಕ್ ಸೊಪ್ಪಿನಲ್ಲಿ 30 ಗ್ರಾಂ ಪ್ರೋಟೀನ್ ಇರುತ್ತದೆ. ಇದು ಸಿಕ್ಸ್ ಪ್ಯಾಕ್ ಆಬ್ಸ್ ಮಾಡಲು ನೆರವಾಗುತ್ತದೆ.

ಎಲೆಕೋಸು : ಫೈಬರ್ ಅಂಶ ಹೆಚ್ಚಾಗಿರುವ ಎಲೆಕೋಸು ತೂಕ ಕಡಿಮೆ ಮಾಡಲು ಸಹಾಯಕಾರಿ. ಒಂದು ಕಪ್ ಎಲೆಕೋಸಿನಲ್ಲಿ 70 ಗ್ರಾಂ ಪೋಷಕಾಂಶವಿರುತ್ತದೆ.

ಬ್ರೊಕ್ಲಿ : ಕೆಲವರು ಬ್ರೊಕ್ಲಿ ತಿನ್ನಲು ಇಷ್ಟಪಡುವುದಿಲ್ಲ. ಆದ್ರೆ ಒಂದು ಕಪ್ ಬ್ರೊಕ್ಲಿಯಲ್ಲಿ 91 ಗ್ರಾಂ ಪೋಷಕಾಂಶವಿರುತ್ತದೆ. ಪ್ರತಿದಿನ ಇದನ್ನು ತಿನ್ನುವುದರಿಂದ ಮಸಲ್ಸ್ ಬಿಲ್ಡ್ ಮಾಡಬಹುದು.

ಗೋಬಿ : ಹೂಕೋಸು ಕೂಡ ಪೋಷಕಾಂಶಗಳ ಆಗರ. ಒಂದು ಕಪ್ ಹೂಕೋಸಿನಲ್ಲಿ 100 ಗ್ರಾಂ ಪೋಷಕಾಂಶವಿರುತ್ತದೆ. ಕೇವಲ 25 ಕ್ಯಾಲೋರಿ ಹೊಂದಿರುತ್ತದೆ. ತೂಕ ಕಡಿಮೆ ಮಾಡುವ ಜೊತೆಗೆ ಆಬ್ಸ್ ಬಿಲ್ಡ್ ಮಾಡಲು ಹೂಕೋಸು ಉಪಯುಕ್ತ.

ಅಣಬೆ : ಬಿಳಿಯ ಅಣಬೆಯಲ್ಲಿ ಹೆಚ್ಚು ಪ್ರೋಟೀನ್ ಇರುತ್ತದೆ. ಒಂದು ಕಪ್ ಅಣಬೆಯಲ್ಲಿ 103 ಗ್ರಾಂ ಪೋಷಕಾಂಶವಿರುತ್ತದೆ. ಇದು ಸಿಕ್ಸ್ ಪ್ಯಾಕ್ ಮಾಡಲು ಸಹಕಾರಿಯಾಗಬಲ್ಲ ಉತ್ತಮ ತರಕಾರಿಗಳಲ್ಲೊಂದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...