ಪ್ರತಿ ದಿನವೂ ಫ್ಯಾಷನ್ ಬದಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಕ್ಸ್ ಇಲ್ಲದೆ ಬೂಟ್ ಧರಿಸುವವರ ಸಂಖ್ಯೆ ಹೆಚ್ಚಿದೆ. ಹಾಲಿವುಡ್ ನಲ್ಲಿ ಹೆಚ್ಚಾಗಿ ಕಾಣಸಿಗ್ತಿದ್ದ ಈ ಫ್ಯಾಷನ್ ಭಾರತಕ್ಕೂ ಕಾಲಿಟ್ಟಿದೆ.
ಸಾಕ್ಸ್ ಹಾಕದೆ ಬೂಟ್ ಧರಿಸಿದ್ರೆ ಕಾಲು ಆಕರ್ಷಕವಾಗಿ ಕಾಣೋದು ಸಹಜ. ಜನರನ್ನು ಇದು ಸೆಳೆಯುತ್ತದೆ. ಆದ್ರೆ ಈ ಫ್ಯಾಷನ್ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗ್ತಿದೆ.
ಸಂಶೋಧನೆಯೊಂದರ ಪ್ರಕಾರ ಸಾಕ್ಸ್ ಇಲ್ಲದೆ ಬೂಟ್ ಧರಿಸುವುದು ಅಪಾಯಕರ ಎಂದಿದೆ. ಫಂಗಸ್ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ.
ದಿನಪೂರ್ತಿ ಬೂಟ್ ಧರಿಸುವುದ್ರಿಂದ ಪಾದ ಬೆವರುತ್ತದೆ. ಈ ಬೆವರನ್ನು ಸಾಕ್ಸ್ ಹೀರಿಕೊಳ್ಳುತ್ತದೆ. ಸಾಕ್ಸ್ ಧರಿಸದೆ ಬೂಟ್ ಹಾಕಿದ್ರೆ ಧೂಳು ಹಾಗೂ ಬೆವರಿನ ಪ್ರಮಾಣ ಹೆಚ್ಚಾಗಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ ಎಂದು ಸಂಶೋಧನೆ ಹೇಳಿದೆ.
ಲೆದರ್ ಬೂಟ್ ನಲ್ಲಿ ಗಾಳಿ ಆಡುವುದಿಲ್ಲ. ಬೆವರು, ಧೂಳು ಒಂದಾಗಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುವ ಜೊತೆಗೆ ಪಾದದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಓಡಾಡಲು ಕಷ್ಟಪಡುವ ಪರಿಸ್ಥಿತಿ ಎದುರಾಗುತ್ತದೆ. ಫ್ಯಾಷನ್ ಬದಿಗಿಟ್ಟು ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.