MG ಮೋಟಾರ್ ಇಂಡಿಯಾ ಕೆಲವೇ ದಿನಗಳಲ್ಲಿ 2023 ಹೆಕ್ಟರ್ ಫೇಸ್‌ಲಿಫ್ಟ್ ಅನ್ನು ಲಾಂಚ್ ಮಾಡಲು ಸಿದ್ಧವಾಗಿದೆ. ಫೇಸ್‌ಲಿಫ್ಟೆಡ್ ಆವೃತ್ತಿಯ ಬಿಡುಗಡೆಗೆ ಮುನ್ನವೇ ಅದರ ಬಾಹ್ಯ ಮತ್ತು ಒಳಾಂಗಣ ವಿನ್ಯಾಸವು ಸೋರಿಕೆಯಾಗಿದೆ. 2023 MG ಹೆಕ್ಟರ್ ಫೇಸ್‌ಲಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ XUV700, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮತ್ತು ಟಾಟಾ ಹ್ಯಾರಿಯರ್‌ಗಳಿಗೆ ನೇರ ಪ್ರತಿಸ್ಪರ್ಧಿಯಾಗಿದೆ.
2023 MG ಹೆಕ್ಟರ್ ಫೇಸ್‌ಲಿಫ್ಟ್‌ನ ವಿನ್ಯಾಸ ಬಹಳ ಅಂದವಾಗಿದೆ. ಬಾಹ್ಯ ವಿನ್ಯಾಸವು ಕೊಂಚ ದೊಡ್ಡದಾಗಿದೆ, ಬಂಪರ್ ಮತ್ತಷ್ಟು ಕೆಳಗೆ ಚಾಚಿದೆ. ಗ್ರಿಲ್ ಅದ್ಭುತವಾಗಿ ಕಾಣ್ತಿದೆ, ಕೋನೀಯ ಕ್ರೋಮ್ ಸರೌಂಡ್ ಜೊತೆಗೆ ಹೊಸ ಡೈಮಂಡ್ ತರಹದ ಮಾದರಿ ಇದರ ಹೈಲೈಟ್. ಅದು ಎಲ್ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನೂ ಹೊಂದಿದೆ. 2023 ಹೆಕ್ಟರ್ ಸ್ಪ್ಲಿಟ್-ಹೆಡ್‌ಲ್ಯಾಂಪ್ ವಿನ್ಯಾಸವನ್ನು ಪಡೆದಿದೆ. ಹಿಂಭಾಗದಲ್ಲಿ 2023 ಹೆಕ್ಟರ್ ಹೊಸ ಟೈಲ್-ಲ್ಯಾಂಪ್ ಅಸೆಂಬ್ಲಿಯನ್ನು ಹೊಂದಿದೆ ಮತ್ತು ಮರುವಿನ್ಯಾಸಗೊಳಿಸಲಾದ ಕೆಂಪು ಪಟ್ಟಿಯೊಂದಿಗೆ ಎರಡೂ ತುದಿಗಳಲ್ಲಿ ದೀಪಗಳನ್ನು ಸಂಪರ್ಕಿಸುತ್ತದೆ.
ಡಿಸೈನ್‌ನಲ್ಲಿ MGಯ ಟ್ವೀಕ್‌ಗಳು SUVಗೆ ಸ್ಪೋರ್ಟಿಯರ್ ಲುಕ್ ಕೊಡ್ತಾ ಇದೆ. ಹೆಕ್ಟರ್‌ನ ಹೊರಭಾಗದಲ್ಲಿ ಅಂದದ ಬದಲಾವಣೆಗಳಾಗಿವೆ. ಆದ್ರೆ SUV ಪ್ರೊಫೈಲ್‌ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಹೆಕ್ಟರ್ ಫೇಸ್‌ಲಿಫ್ಟ್ ಪ್ರಸ್ತುತ ಮಾದರಿಯಲ್ಲಿರು 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ಟೈರ್‌ಗಳೊಂದಿಗೆ ಬರಲಿದೆ.