ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಸಾಕಷ್ಟು ಅಭಿಮಾನಿಗಳನ್ನೂ ಹೊಂದಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಚಿನ್ ಹಂಚಿಕೊಂಡಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋ ಸಚಿನ್ ಅಭಿಮಾನಿಗಳ ಹೃದಯ ಗೆಲ್ಲೋದು ಗ್ಯಾರಂಟಿ. ಸಚಿನ್ ತೆಂಡೂಲ್ಕರ್ ಅವರ ಸರಳತೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದ ಸಚಿನ್ ಸರಳ ಜೀವನವನ್ನೇ ಹೆಚ್ಚು ಇಷ್ಟಪಡುತ್ತಾರೆ. ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ.
ಸಚಿನ್, ಕಟ್ಟಿಗೆ ಒಲೆಯ ಮೇಲೆ ಬೇಯಿಸಿದ ರೊಟ್ಟಿಗಳನ್ನು ನೆಲದ ಮೇಲೆ ಕುಳಿತು ತಿನ್ನುತ್ತಿರುವ ದೃಶ್ಯವೇ ಇದಕ್ಕೆ ಸಾಕ್ಷಿ. ರಾಜಸ್ತಾನದ ಮಹಿಳೆಯರು ಪಕ್ಕಾ ದೇಸಿ ಶೈಲಿಯಲ್ಲಿ ಮಿಲೆಟ್ ರೊಟ್ಟಿ ಮಾಡಿದ್ದಾರೆ. ಅದನ್ನು ನೋಡಿ ಇಷ್ಟಪಟ್ಟ ಸಚಿನ್ ಅಲ್ಲಿಗೆ ಖುದ್ದಾಗಿ ಬಂದು, ನೆಲದ ಮೇಲೆ ಕುಳಿತುಕೊಂಡು ಮಿಲೆಟ್ ರೊಟ್ಟಿಯನ್ನು ದೇಸಿ ತುಪ್ಪದ ಜೊತೆಗೆ ಸವಿದಿದ್ದಾರೆ. ಕೊಟ್ಟ ಭರವಸೆಯಂತೆ ತಾನು ರೊಟ್ಟಿ ಸವಿಯಲು ಬಂದಿರುವುದಾಗಿ ಸಚಿನ್ ಹೇಳಿದ್ದಾರೆ. ತಮಗೂ ಅಡುಗೆ ಮಾಡುವುದು ಗೊತ್ತು, ಆದರೆ ಇಷ್ಟು ರೌಂಡ್ ಆಗಿ ಚಪಾತಿ ಮಾಡಲು ಬರುವುದಿಲ್ಲ ಅಂತಾ ಒಪ್ಪಿಕೊಂಡಿದ್ದಾರೆ.
ಕಟ್ಟಿಗೆ ಒಲೆಯಲ್ಲಿ ಬೇಯಿಸಿದ ಆಹಾರವು ಸಾಮಾನ್ಯ ಗ್ಯಾಸ್‌ನಲ್ಲಿ ಬೇಯಿಸಿದ ಆಹಾರಕ್ಕಿಂತ ರುಚಿಕರ ಎನ್ನುತ್ತಲೇ ಸಚಿನ್ ರೊಟ್ಟಿಯನ್ನು ಟೇಸ್ಟ್ ಮಾಡಿದ್ರು. ಸಚಿನ್ ತೆಂಡೂಲ್ಕರ್ 9 ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿ ಅವರದ್ದು. ತೆಂಡೂಲ್ಕರ್, ಟೀಂ ಇಂಡಿಯಾ ಪರ ಒಟ್ಟು 664 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 48.52 ಸರಾಸರಿಯಲ್ಲಿ 34357 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳು ಮತ್ತು 164 ಅರ್ಧ ಶತಕಗಳನ್ನು ಬಾರಿಸಿದ ಹೆಮ್ಮೆಯ ಆಟಗಾರ ಸಚಿನ್.