ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ. ಅನೇಕ ಬಾರಿ ನಮ್ಮ ಕೆಟ್ಟ ಅಭ್ಯಾಸ ಹಾಗೂ ಕೆಟ್ಟ ನಡವಳಿಕೆಯಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ತೆವೆ. ನಮ್ಮ ಆರೋಗ್ಯ ಹಾಳು ಮಾಡುವ ಅಭ್ಯಾಸಗಳಿಂದ ದೂರವಿದ್ರೆ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಾಸ್ತು ಶಾಸ್ತ್ರದಲ್ಲಿ ಇದ್ರ ಬಗ್ಗೆಯೂ ಹೇಳಲಾಗಿದೆ. ನಮ್ಮ ಮನೆ ಹಾಗೂ ನಾವು ಮಲಗುವ ಕೋಣೆ ಮತ್ತು ನಮ್ಮ ಕೆಲ ಅಭ್ಯಾಸಗಳು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಪಾದಗಳನ್ನು ಪೂರ್ವ ದಿಕ್ಕಿಗಿಟ್ಟು ಮಲಗಬಾರದು. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಪಶ್ಚಿಮ ದಿಕ್ಕಿನಲ್ಲಿ ನೀರಿನ ಮೂಲವಿದ್ದು, ಅದು ಸೋರುತ್ತಿದ್ದರೆ, ಅದು ಕೂಡ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಮನೆಯ ಈಶಾನ್ಯ ದಿಕ್ಕಿನಲ್ಲಿ ಕೊಳಕಿದ್ದರೆ ಅದನ್ನು ಸ್ವಚ್ಛಗೊಳಿಸಿ. ಹಾಗೆ ಮನೆಯಲ್ಲಿ ಬಳಸದ ವಸ್ತುಗಳನ್ನು ಈಶಾನ್ಯ ದಿಕ್ಕಿನಲ್ಲಿಟ್ಟಿದ್ದರೆ ಅದನ್ನು ತೆಗೆಯಿರಿ. ಪ್ರತಿ ದಿನ ಬರುವ ತಲೆನೋವಿಗೆ ಇದೂ ಕಾರಣವಾಗಿರಬಹುದು.
ಅಗ್ನಿ ದಿಕ್ಕಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿದ್ದರೆ, ತಕ್ಷಣ ಅದನ್ನು ಬದಲಾಯಿಸಿ. ಈ ಅಭ್ಯಾಸವು ಅಧಿಕ ರಕ್ತದೊತ್ತಡದ ಕಾಯಿಲೆಗೆ ಕಾರಣವಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಸಂತಾನೋತ್ಪತ್ತಿ ಸಮಸ್ಯೆ ಕಾಡುತ್ತಿದ್ದರೆ, ಮನೆಯ ಮಧ್ಯ ಭಾಗದಲ್ಲಿ ಮಲಗಬೇಕು. ಇದು ಸಂತಾನ ಸಮಸ್ಯೆಯನ್ನು ತಡೆಯುತ್ತದೆ.