ಸೂರ್ಯೋದಯದ ಮೊದಲ ಕಿರಣ ಮನೆಯೊಳಗೆ ಬೀಳುತ್ತಿದ್ದಂತೆ ಅನೇಕರ ಮನೆಯಲ್ಲಿ ಗಂಟೆ ಶಬ್ಧ ಕೇಳುತ್ತದೆ. ದೀಪ-ಧೂಪದ ಪರಿಮಳ ಮನೆಯನ್ನು ಆವರಿಸುತ್ತದೆ. ದಿನವನ್ನು ಪೂಜೆ-ಪಾಠದ ಜೊತೆ ಶುರುಮಾಡಿದ್ರೆ ಆ ದಿನ ಸುಂದರವಾಗಿರುತ್ತದೆ.
ಭಗವಂತನ ಕೃಪೆಗೆ ಪಾತ್ರರಾಗಲು ಬೆಳಿಗ್ಗೆ ಪೂಜೆ ಮಾಡುವುದು ಬಹಳ ಒಳ್ಳೆಯದು. ಹಾಗೆ ಸೂರ್ಯಾಸ್ತನ ನಂತ್ರ ಮಾಡುವ ಪೂಜೆ ಕೂಡ ಸಾಕಷ್ಟು ವಿಶೇಷತೆಗಳನ್ನು ಪಡೆದಿದೆ.
ಕಚೇರಿಗೆ ಹೋಗುವ ಆತುರದಿಂದಾಗಿ ಕೆಲವರ ಮನೆಯಲ್ಲಿ ಬೆಳಿಗ್ಗೆ ದೇವರ ಪೂಜೆ ಮಾಡುವುದಿಲ್ಲ. ಸೂರ್ಯಾಸ್ತದ ನಂತ್ರ ಪೂಜೆ ಮಾಡ್ತಾರೆ. ಆದ್ರೆ ಸೂರ್ಯಾಸ್ತದ ನಂತ್ರ ಪೂಜೆ ಮಾಡುವವರು ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.
ತುಳಸಿ ಎಲೆ ಹಾಗೂ ಗಂಗಾ ನೀರು ಎಂದೂ ಹಳಸುವುದಿಲ್ಲ. ಹೂ ಹಳಸಿ ಹೋಗುತ್ತದೆ. ಹಾಗಾಗಿ ಹಳಸಿದ ಹೂಗಳನ್ನು ಬಳಸಬೇಡಿ.
ಸೂರ್ಯಾಸ್ತದ ನಂತ್ರ ದೇವಾನುದೇವತೆಗಳು ವಿಶ್ರಾಂತಿಗೆ ತೆರಳುತ್ತಾರೆ. ಹಾಗಾಗಿ ಶಂಖ ಹಾಗೂ ಗಂಟೆ ಬಾರಿಸಬೇಡಿ.
ಸೂರ್ಯಾಸ್ತದ ನಂತ್ರ ಯಾವುದೇ ಹೂವನ್ನು ಕೀಳಬೇಡಿ. ಸಂಜೆ ಪೂಜೆ ಮಾಡುವವರು ಹಗಲಿನಲ್ಲಿಯೇ ಹೂಗಳನ್ನು ಕಿತ್ತಿಟ್ಟುಕೊಳ್ಳಿ.
ಸೂರ್ಯ ದೇವನ ಪೂಜೆಯನ್ನು ಸೂರ್ಯಾಸ್ತದ ನಂತ್ರ ಮಾಡಬೇಡಿ.
ರಾತ್ರಿ ಮಲಗುವ ಮೊದಲು ದೇವರ ಕೋಣೆಯ ಬಾಗಿಲು ಮುಚ್ಚಿ. ಒಮ್ಮೆ ಮುಚ್ಚಿದ ನಂತ್ರ ಮತ್ತೆ ಮತ್ತೆ ತೆಗೆಯುತ್ತಿರಬೇಡಿ.