ಈರುಳ್ಳಿ ಬೆಲೆ ಕುಸಿತದಿಂದ ದೇಶದಾದ್ಯಂತ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಇದರ ಮಧ್ಯೆ ಗುಜರಾತ್ ಸರ್ಕಾರ ತನ್ನ ರಾಜ್ಯದ ಈರುಳ್ಳಿ ಹಾಗೂ ಆಲೂಗಡ್ಡೆ ಬೆಳೆಗಾರರ ನೆರವಿಗೆ ಧಾವಿಸಿದೆ.
ಇವುಗಳ ಸಾಗಣೆ ಹಾಗೂ ಸಂಗ್ರಹಣೆಗಾಗಿ 330 ಕೋಟಿಯ ಪ್ಯಾಕೇಜ್ ಘೋಷಿಸಲಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ 240 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುತ್ತಿದೆ.
ಗುಜರಾತಿನಲ್ಲಿ ಈ ವರ್ಷ ಏಳು ಲಕ್ಷ ಟನ್ ಕೆಂಪು ಈರುಳ್ಳಿ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದ್ದು, ಜೊತೆಗೆ ಅಧಿಕ ಉತ್ಪಾದನೆಯಿಂದಾಗಿ ಆಲೂಗಡ್ಡೆ ದರ ಸಹ ಕುಸಿದಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ನೆರವಾಗುವ ಸಲುವಾಗಿ ಪ್ಯಾಕೇಜ್ ಘೋಷಿಸಲಾಗಿದೆ.