ಎಣ್ಣೆಯಲ್ಲಿ ಕರಿದ ಕುರುಕುರು ತಿಂಡಿ ಸೇವನೆ ಮಾಡುವ ಬದಲು ಮನೆಯಲ್ಲೇ ತಯಾರಿಸಿ ಶೇಂಗಾ ಚಿಕ್ಕಿ ತಿನ್ನಿ. ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಿ.
ಬೆಲ್ಲ ಹಾಗೂ ನೆಲಕಡಲೆಯಿಂದ ತಯಾರಿಸಿದ ಶೇಂಗಾ ಚಿಕ್ಕಿಯಲ್ಲಿ ಸಾಕಷ್ಟು ಪ್ರಮಾಣದ ಪ್ರೊಟೀನ್ ಗಳು ಇರುತ್ತವೆ. ಇವು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತವೆ. ಮಕ್ಕಳು, ಗರ್ಭಿಣಿಯರು ಹಾಗೂ ಮನೆಮಂದಿಯೆಲ್ಲಾ ಇದನ್ನು ಸೇವಿಸಬಹುದು.
ಇವೆರಡರಲ್ಲೂ ಕಬ್ಬಿಣದ ಅಂಶ ಸಾಕಷ್ಟಿರುವುದರಿಂದ ಮೂಳೆಗಳ ದೃಢತೆಗೆ ನೆರವಾಗುತ್ತವೆ. ದೃಷ್ಟಿಯೂ ಸುಧಾರಿಸುತ್ತದೆ. ಇದು ವಿಟಮಿನ್ ಎ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತವೆ. ಬೆಲ್ಲದ ಸೇವನೆಯಿಂದ ಹಿಮೋಗ್ಲೋಬಿನ್ ಪ್ರಮಾಣವೂ ಏರಿಕೆಯಾಗುತ್ತದೆ.
ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಬಹುದು ಮಾತ್ರವಲ್ಲ ಚರ್ಮರೋಗದಿಂದಲೂ ದೂರವಿರಬಹುದು. ಮೊದಲು ನೆಲಕಡಲೆಯನ್ನು ತುಸು ಹುರಿದು ಪಕ್ಕಕ್ಕಿಡಿ. ಬಳಿಕ ಬೆಲ್ಲದ ಪಾಕ ಬರಿಸಿ. ಕಡಲೆಯನ್ನು ಇದಕ್ಕೆ ಸೇರಿಸಿ. ಬಟ್ಟಲಿಗೆ ಸುರಿದು ಸೆಟ್ ಮಾಡಿಕೊಳ್ಳಿ. ಚಾಕುವಿನಿಂದ ಬೇಕಿರುವ ಆಕಾರಕ್ಕೆ ಕತ್ತರಿಸಿ. ತಣ್ಣಗಾದ ಬಳಿಕ ಸವಿಯಿರಿ.
ಹಲವು ದಿನಗಳ ತನಕ ಹಾಳಾಗದೆ ಉಳಿಯುವ ಇದನ್ನು ಮಕ್ಕಳಿಗೂ ಸೇವಿಸಲು ಕೊಡಿ.