
ಕೆಲವಷ್ಟು ಮಂದಿ ಜಿಮ್ ಗೆ ಹೋಗಿ ಮಧ್ಯದಲ್ಲೇ ಬಿಟ್ಟು ಬಿಡುತ್ತಾರೆ. ಇವರ ದೇಹಾಕೃತಿ ಸ್ವಲ್ಪ ದಿನಗಳಲ್ಲೇ ವಿಪರೀತ ಊದಿಕೊಂಡಿರುವುದನ್ನು ನೀವು ನೋಡಿರಬಹುದು. ಇದಕ್ಕೆ ಕಾರಣವೇನು ಗೊತ್ತೇ?
ನಿತ್ಯ ಜಿಮ್, ವ್ಯಾಯಾಮ ಮಾಡುವವರು ಕೆಲವು ದಿನಗಳ ಮಟ್ಟಿಗೆ ವಿಶ್ರಾಂತಿ ಪಡೆದುಕೊಂಡರೆ ಅಥವಾ ಅದನ್ನು ನಿಲ್ಲಿಸಿದರೆ ಅವರು ವಿಪರೀತ ದಪ್ಪವಾಗುವುದನ್ನು ನೀವು ಕಂಡಿರಬಹುದು. ಇದಕ್ಕೆ ಮುಖ್ಯ ಕಾರಣ ಅವರಿಗೆ ಹಸಿವಾಗುವುದು. ನಿಯಮಿತವಾಗಿ ನಡೆಯುತ್ತಿದ್ದ ದೇಹದ ವ್ಯಾಯಾಮ ನಿಂತ ಕಾರಣ ಹೊಟ್ಟೆ ವಿಪರೀತ ಹಸಿದುಕೊಳ್ಳುತ್ತದೆ. ಪರಿಣಾಮ ಅವರು ಹೆಚ್ಚು ತಿಂದು ಕೊಬ್ಬು ಬೆಳೆಯುತ್ತದೆ. ವ್ಯಾಯಾಮ ಮಾಡುವುದರಿಂದ ದೇಹದ ಹಸಿವಿನ ಹಾರ್ಮೋನ್ ಕಡಿಮೆ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ.
ವ್ಯಾಯಾಮ ಮಾಡಿದಾಗ ಹೆಚ್ಚು ಬೆವರುವುದರಿಂದ ಹೆಚ್ಚಿನ ನೀರು ಕುಡಿಯಬೇಕಾಗುತ್ತದೆ. ಇದರಿಂದ ಹಸಿವು ಸಹಜವಾಗಿಯೇ ಕಡಿಮೆಯಾಗುತ್ತದೆ. ವ್ಯಾಯಾಮ ಇಲ್ಲದಾಗ ಹಸಿವು ಹೆಚ್ಚಲು ಇದೂ ಒಂದು ಕಾರಣ.
ವ್ಯಾಯಾಮ ಮಾಡದಿರುವಾಗ ದೇಹ ಅನಾರೋಗ್ಯಕರ ಆಹಾರವನ್ನು ಸೇವನೆ ಮಾಡುವಂತೆ ಉತ್ತೇಜಿಸುತ್ತದೆ ಎನ್ನುತ್ತದೆ ಇತ್ತೀಚಿನ ಸಂಶೋಧನೆ.