ವ್ಯಾಕ್ಸಿಂಗ್ ಮಾಡಿಕೊಂಡ ಬಳಿಕ ತ್ವಚೆಯ ವಿಪರೀತ ತುರಿಕೆ ಉಂಟಾಗಿದೆಯೇ, ದದ್ದುಗಳು ಮೂಡಿ ನಿಮ್ಮ ತ್ವಚೆಯ ಸೌಂದರ್ಯವನ್ನೇ ಹಾಳು ಮಾಡಿವೆಯೇ, ಚಿಂತೆ ಬಿಡಿ ಹೀಗೆ ಮಾಡಿ.
ವ್ಯಾಕ್ಸಿಂಗ್ ಮಾಡಿಕೊಂಡ ಬಳಿಕ ಮರೆಯದೆ ಸ್ಕ್ರಬ್ ಮಾಡಿ. ಮನೆಯಲ್ಲೇ ಉಪ್ಪು ಅಥವಾ ಸಕ್ಕರೆಯ ಸ್ಕ್ರಬ್ ಮಾಡಿದರೆ ತುರಿಕೆ ಕಾಣಿಸಿಕೊಳ್ಳುವುದಿಲ್ಲ. ಇದನ್ನು ವಾರಕ್ಕೆರಡು ಬಾರಿ ಮಾಡಿದರೂ ಸಾಕು.
ಸೂಕ್ಷ್ಮ ತ್ವಚೆ ಹೊಂದಿರುವವರಿಗೆ ವ್ಯಾಕ್ಸಿಂಗ್ ಹೊಂದಿಕೊಳ್ಳದೆ ಇರಬಹುದು. ಆಗ ನೀವು ಶೇವಿಂಗ್ ಮೊರೆ ಹೋಗುವುದು ಒಳ್ಳೆಯದು. ಉತ್ತಮ ಗುಣಮಟ್ಟದ ರೇಜರ್ ಬಳಸುವ ಮೂಲಕ ಇದರ ಅಡ್ಡ ಪರಿಣಾಮಗಳನ್ನು ತಡೆಗಟ್ಟಬಹುದು.
ವ್ಯಾಕ್ಸಿಂಗ್ ಮಾಡುವಾಗ ಅತಿಯಾದ ಸ್ಕ್ರಬ್ ಬಳಕೆ ಒಳ್ಳೆಯದಲ್ಲ. ಇದರಿಂದ ತ್ವಚೆಗೂ ಹಾನಿಯಾದೀತು. ವ್ಯಾಕ್ಸಿಂಗ್ ಮಾಡಿಕೊಂಡ ಬಳಿಕ ಮರೆಯದೆ ಮಾಯಿಸ್ಚರೈಸರ್ ಹಚ್ಚಿ. ಇಲ್ಲವೇ ಹಾಲಿನ ಕೆನೆಯಿಂದ ನಿಮ್ಮ ತ್ವಚೆಗೆ ಮಸಾಜ್ ಮಾಡಿ.