ಕೆಲವರಿಗೆ ಬಾಯಾರಿಕೆ ಜಾಸ್ತಿ. ಎಷ್ಟೇ ನೀರು ಕುಡಿದರೂ ತೃಪ್ತಿಯಾಗುವುದಿಲ್ಲ. ತಡರಾತ್ರಿಯಲ್ಲಿ ಬಾಯಾರಿಕೆಯಿಂದಾಗಿ ಅನೇಕ ಬಾರಿ ನಿದ್ರೆಯಿಂದ ಎಚ್ಚರವಾಗುವುದುಂಟು. ಈ ರೀತಿ ಪದೇ ಪದೇ ಬಾಯಾರಿಕೆಯಾಗುವುದೇಕೆ? ಇದು ಯಾವುದಾದರೂ ಕಾಯಿಲೆಗಳ ಲಕ್ಷಣವಿರಬಹುದೇ? ಎಂಬುದನ್ನೆಲ್ಲ ನೋಡೋಣ. ಅತಿಯಾದ ಬಾಯಾರಿಕೆಗೆ ಕಾರಣಗಳನ್ನು ಸಕಾಲದಲ್ಲಿ ಪತ್ತೆ ಮಾಡಿದರೆ ಮಾತ್ರ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳಬಹುದು.
ಅತಿಯಾದ ಬಾಯಾರಿಕೆಯ ಕಾರಣಗಳು
ಮಧುಮೇಹ: ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾದರೆ ದೇಹವು ಈ ಸಕ್ಕರೆಯನ್ನು ಮೂತ್ರದ ಮೂಲಕ ಹೊರಹಾಕಲು ಪ್ರಯತ್ನಿಸುತ್ತದೆ. ಈ ಕಾರಣದಿಂದಾಗಿ ಆಗಾಗ್ಗೆ ಮೂತ್ರ ವಿಸರ್ಜಿಸಬೇಕು. ದೇಹದಿಂದ ನೀರು ಮತ್ತೆ ಮತ್ತೆ ಹೊರಬರಲು ಪ್ರಾರಂಭಿಸುತ್ತದೆ. ಇದರಿಂದಾಗಿಯೇ ಪದೇ ಪದೇ ಬಾಯಾರಿಕೆಯಾಗುತ್ತದೆ.
ರಕ್ತದೊತ್ತಡ: ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಬೆವರುವಿಕೆ ಹೆಚ್ಚಾಗಿರುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಎಷ್ಟೇ ನೀರು ಕುಡಿದರೂ ದಾಹ ತಣಿಯುವುದಿಲ್ಲ. ಅಧಿಕ ರಕ್ತದೊತ್ತಡದ ಸಮಸ್ಯೆಯು ಕೆಟ್ಟ ಜೀವನಶೈಲಿಯ ಸೂಚನೆಯಾಗಿದೆ. ಅಧಿಕ ರಕ್ತದೊತ್ತಡದ ಜೊತೆಗೆ, ದೇಹದಲ್ಲಿ ನೀರಿನ ಕೊರತೆಯೂ ಉಂಟಾಗುತ್ತದೆ.
ಡಿಹೈಡ್ರೇಶನ್: ನಿರ್ಜಲೀಕರಣ ದೇಹದಲ್ಲಿ ನೀರಿನ ಕೊರತೆಯನ್ನು ಸೂಚಿಸುವ ಸಮಸ್ಯೆ. ಕಡಿಮೆ ನೀರು ಕುಡಿಯುವುದರಿಂದ ಅಥವಾ ನೀರನ್ನೇ ಕುಡಿಯದಿರುವುದರಿಂದ ದೇಹದಲ್ಲಿ ಡಿಹೈಡ್ರೇಶನ್ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎಷ್ಟೇ ನೀರು ಕುಡಿದರೂ ದಾಹ ತಣಿಯುವುದಿಲ್ಲ. ಡಿಹೈಡ್ರೇಶನ್ ನಿವಾರಿಸಲು ಹೆಚ್ಹೆಚ್ಚು ನೀರು, ಹಣ್ಣಿನ ಜ್ಯೂಸ್ ಮತ್ತು ಎಳನೀರನ್ನು ಸೇವಿಸಬೇಕು.