ವಿಟಮಿನ್ ಸಿ ಮಾತ್ರೆ ಸೇವಿಸುವ ಮುನ್ನ…..

ವಿಟಮಿನ್ ಸಿ ಮಾತ್ರೆ ಸೇವಿಸುತ್ತಿದ್ದರೆ ಈ ವಿಷಯ ನೆನಪಿರಲಿ, ವೈದ್ಯರ ಸಲಹೆ ಪಡೆಯದೆ ನೀವು ಈ ಮಾತ್ರೆಗಳನ್ನು ಸೇವಿಸುವುದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.

ವಿಟಮಿನ್ ಸಿ ಮಾತ್ರೆಗಳನ್ನು ಅತಿಯಾಗಿ ಸೇವಿಸುವುದರಿಂದ ವಾಂತಿಯ ಲಕ್ಷಣಗಳು ಕಂಡುಬಂದೀತು. ಕೆಲವೊಮ್ಮೆ ವಿಪರೀತ ತಲೆನೋವು, ವಾಕರಿಕೆಯೂ ಕಂಡುಬಂದಾವು. ಈ ಮಾತ್ರೆಗಳನ್ನು ಸೇವಿಸುವ ಬದಲು ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳನ್ನು ಸೇವಿಸಿ, ಈ ಕೊರತೆಯನ್ನು ಸರಿದೂಗಿಸಿ.

ಕೆಲವರಿಗೆ ವಿಟಮಿನ್ ಸಿ ಹೆಚ್ಚು ಸೇವಿಸಿದಾಗ ಹೊಟ್ಟೆಯ ಸೆಳೆತದಂಥ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಅಬ್ಡಾಮಿನಲ್ ಕ್ರ್ಯಾಂಪ್ ಎಂದೂ ಕರೆಯಲಾಗುತ್ತದೆ. ಹಾಗಾಗಿ ಈ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬೇಡಿ.

ಕೆಲವೊಮ್ಮೆ ಇದರಿಂದ ನಿಮ್ಮ ಹೊಟ್ಟೆ ಹಾಳಾಗಿ, ವಾಂತಿ ಬೇಧಿಯಂಥ ಸಮಸ್ಯೆಗಳು ಕಂಡು ಬರಬಹುದು. ಇದರಿಂದ ನಿಮ್ಮ ದೇಹ ನಿರ್ಜಲೀಕರಣಗೊಳ್ಳಬಹುದು. ಇವುಗಳನ್ನೆಲ್ಲಾ ತಪ್ಪಿಸಲು ನೀವು ವೈದ್ಯರ ಮಾತಿನಂತೆ ನಡೆದುಕೊಳ್ಳುವುದು ಬಹಳ ಮುಖ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read