ಮಲ್ಟಿ ವಿಟಮಿನ್ ಮಾತ್ರೆ ತೆಗೆದುಕೊಳ್ತೀರಾ…..? ಹಾಗಾದ್ರೆ ತಿಳಿದುಕೊಳ್ಳಿ ಈ ವಿಷಯ

ನೀವು ವಿಟಮಿನ್ ಮಾತ್ರೆಗಳ ದಾಸರೆ…? ಇವುಗಳ ಸೇವನೆಯಿಂದ ಯಾವ ರೋಗಗಳು ನಿಮ್ಮ ಸಮೀಪ ಸುಳಿಯುವುದಿಲ್ಲ ಎಂದುಕೊಂಡಿದ್ದೀರಾ? ಇದರ ಸೇವನೆ ಮುನ್ನ ನೀವು ವೈದ್ಯರನ್ನು ಸಂಪರ್ಕಿಸಿದ್ದೀರಾ?

ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಮಲ್ಟಿ ವಿಟಮಿನ್ ಮಾತ್ರೆಗಳನ್ನು ಸೇವಿಸುವುದು ಅಪಾಯ, ವೈದ್ಯರ ಸಲಹೆ ಪಡೆದುಕೊಳ್ಳದೆ ಸೇವಿಸುವುದು ಒಳ್ಳೆಯದಲ್ಲ. ಉದಾಹರಣೆಗೆ ವಿಟಮಿನ್ ಡಿ ಮಾತ್ರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಪಾರ್ಶ್ವವಾಯುವಿನಂಥ ಸಮಸ್ಯೆಗಳು ಕಾಡಬಹುದು.

ಮಲ್ಟಿ ವಿಟಮಿನ್ ಮಾತ್ರೆಗಳ ಸೇವನೆಯಿಂದ ದೇಹಕ್ಕೆ ಹಲವು ಲಾಭಗಳಿವೆ ಎಂಬುದೇನೋ ನಿಜ. ಆದರೆ ನಿಮಗೆ ಈಗಾಗಲೇ ಹಲವು ರೋಗಗಳು ಕಾಡುತ್ತಿದ್ದರೆ, ಮಧುಮೇಹ, ಬಿಪಿ, ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿದ್ದರೆ ವೈದ್ಯರ ಸಲಹೆ ಇಲ್ಲದೆ ಈ ಮಾತ್ರೆ ತೆಗೆದುಕೊಳ್ಳದಿರಿ.

ನೀವು ಈಗಾಗಲೇ ತೆಗೆದುಕೊಳ್ಳುತ್ತಿರುವ ಮಾತ್ರೆಗಳಲ್ಲಿ ಮಲ್ಟಿ ವಿಟಮಿನ್ ಮಾತ್ರೆಗಳ ಅಂಶಗಳಿರಬಹುದು. ಹಾಗಾಗಿ ಎರಡೆರಡು ಮಾತ್ರೆಗಳ ಸೇವನೆಯಿಂದ ದೇಹದ ಮೇಲೆ ಅಡ್ಡಪರಿಣಾಮಗಳಾಗಬಹುದು. ಹಾಗಾಗಿ ವೈದ್ಯರ ಬಳಿ ಕೇಳದೆ ಈ ಮಾತ್ರೆಗಳನ್ನು ಸೇವಿಸದಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read