
ಆರೋಗ್ಯಕರ ಶರೀರಕ್ಕೆ ಜೀವಸತ್ವ ಹಾಗೂ ಖನಿಜಗಳ ಅವಶ್ಯಕತೆಯಿದೆ. ದೇಹಕ್ಕೆ ವಿಟಮಿನ್ ಡಿ ಅಗತ್ಯವಾಗಿ ಬೇಕು. ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾದ್ರೆ ಕೆಲವೊಂದು ಗಂಭೀರ ಸಮಸ್ಯೆಗಳು ಕಾಡುತ್ತವೆ. ಕೆಲವೊಂದು ಲಕ್ಷಣಗಳಿಂದ ವಿಟಮಿನ್ ಡಿ ಕಡಿಮೆಯಾಗಿದೆ ಎಂಬ ಸಂಗತಿಯನ್ನು ಸುಲಭವಾಗಿ ಅರ್ಧ ಮಾಡಿಕೊಳ್ಳಬಹುದಾಗಿದೆ.
ವಿಟಮಿನ್ ಡಿ ಜೀನ್ ಕಾರ್ಯಗಳನ್ನು ಹಾಗೂ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಇದ್ರಿಂದ ದೇಹ ಆರೋಗ್ಯಕರವಾಗಿರುತ್ತದೆ.
ದೇಹದಲ್ಲಿ ವಿಟಮಿನ್ ಡಿ ಅಂಶ ಕಡಿಮೆಯಾದಲ್ಲಿ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸ್ನಾಯುಗಳು ದುರ್ಬಲವಾಗುತ್ತವೆ. ಹಲ್ಲುಗಳಿಗೆ ಹಾಗೂ ಮೂಳೆಗಳಿಗೆ ಜೀವಸತ್ವ ಡಿ ಬಹಳ ಮುಖ್ಯ ಪೋಷಕಾಂಶವಾಗಿದೆ.
ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದಲ್ಲಿ ಒತ್ತಡ, ಖಿನ್ನತೆ ಹೆಚ್ಚಾಗುತ್ತದೆ. ವಿಟಮಿನ್ ಡಿ ಒತ್ತಡ ಕಡಿಮೆ ಮಾಡುವುದ್ರಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಖಿನ್ನತೆ ಕಡಿಮೆ ಮಾಡಿ ಮನಸ್ಸು ಉಲ್ಲಾಸಿತಗೊಳ್ಳಲು ವಿಟಮಿನ್ ಡಿ ಸಹಕಾರಿ.
ವಿಟಮಿನ್ ಡಿ ಕೊರತೆಯಾದಲ್ಲಿ ಬೆವರು ಹೆಚ್ಚಾಗಿ ಬರುತ್ತದೆ. ತಲೆ ಭಾಗದಲ್ಲಿ ಬೆವರು ಹೆಚ್ಚಾಗಿ ಬರುತ್ತದೆ. ಇಂಥ ಪರಿಸ್ಥಿತಿಯಲ್ಲಿ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಮಕ್ಕಳ ಕೈಗೆ ಹೆಚ್ಚೆಚ್ಚು ಬೆವರು ಬಂದಲ್ಲಿ ವಿಟಮಿನ್ ಡಿ ಕೊರತೆಯಾಗಿದೆ ಎಂದೇ ಅರ್ಥ.
ವಿಟಮಿನ್ ಡಿ ಕೊರತೆಯಿಂದ ಚರ್ಮದ ಬಣ್ಣ ಗಾಢವಾಗುತ್ತದೆ. ವಯಸ್ಸು 50ಕ್ಕಿಂತ ಹೆಚ್ಚಾದಲ್ಲಿ ಈ ಗಾಢತೆ ಹೆಚ್ಚಾಗುತ್ತದೆ.