ವರುಣಾ ಗೆಲ್ಲಲು ವಿ. ಸೋಮಣ್ಣ ಮಾಸ್ಟರ್ ಪ್ಲಾನ್

ಬಯಸದೇ ಬಂದ ಭಾಗ್ಯವೆಂಬಂತೆ ಸಚಿವ ವಿ.ಸೋಮಣ್ಣಗೆ ಚಾಮನಗರ ಕ್ಷೇತ್ರದ ಜೊತೆಗೆ ವರುಣಾ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ. ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಸೋಲಿಸಲು ಹೈಕಮಾಂಡ್ ವಿ.ಸೋಮಣ್ಣರನ್ನ ಕಣಕ್ಕಿಳಿಸಿದೆ. ವರುಣಾದಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿ ವಿಜಯಪತಾಕೆ ಹಾರಿಸಲು ವಿ.ಸೋಮಣ್ಣ ಸಿದ್ದರಾಮಯ್ಯನವರ ವಿರೋಧಿ ಸಂಸದ ವಿ.ಶ್ರೀನಿವಾಸಪ್ರಸಾದರನ್ನ ಮೈಸೂರಲ್ಲಿ ಭೇಟಿ ಮಾಡಿ ಚರ್ಚಿ ಸಿದ್ದಾರೆ.

ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಚಕ್ರವ್ಯೂಹ ರಚಿಸಲು ಇಬ್ಬರೂ ನಾಯಕರು ಗಂಭೀರವಾಗಿ 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಇದರೊಂದಿಗೆ ವರುಣಾ ಕ್ಷೇತ್ರದ ಮುಖಂಡರ ಜೊತೆಗೆ ವಿ. ಸೋಮಣ್ಣ ಸಭೆ ನಡೆಸಲಿದ್ದಾರೆ. ಹೈಕಮಾಂಡ್ ನ ಸೂಚನೆಯಂತೆ ವಿ. ಸೋಮಣ್ಣ ನಡೆಸಲಿದ್ದಾರೆ. ಸಿದ್ದರಾಮಯ್ಯರನ್ನು ಹಣಿಯಲು ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸೋಮಣ್ಣ ಸಭೆ ಕರೆದಿದ್ದು ರಣತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read