ವಜ್ರದ ಆಭರಣ ಧರಿಸುವ ಮೊದಲು ತಿಳಿದಿರಲಿ ಈ ವಿಷ್ಯ

ವಿಶ್ವದ ಅಮೂಲ್ಯ ರತ್ನಗಳಲ್ಲಿ ವಜ್ರವೂ ಒಂದು. ಮಹಿಳೆಯರ ಅಚ್ಚುಮೆಚ್ಚಿನ ಆಭರಣಗಳಲ್ಲಿ ವಜ್ರವೂ ಒಂದು. ಅನೇಕ ಮಹಿಳೆಯರು ವಜ್ರದ ಆಭರಣ ಧರಿಸುವ ಬಯಕೆ ಹೊಂದಿರುತ್ತಾರೆ. ಜ್ಯೋತಿಷ್ಯದಲ್ಲಿ ವಜ್ರ, ಶುಕ್ರ ಗ್ರಹದ ಜೊತೆ ಸಂಬಂಧ ಹೊಂದಿದೆ. ಶುಕ್ರ ಗ್ರಹವನ್ನು ಭೌತಿಕ ಸುಖ, ಸಮೃದ್ಧಿಗೆ ಕಾರಣವೆನ್ನಲಾಗುತ್ತದೆ. ಕೆಲವರಿಗೆ ವಜ್ರ ಧರಿಸುವುದ್ರಿಂದ ಲಾಭವಾದ್ರೆ ಮತ್ತೆ ಕೆಲವರು ತೊಂದರೆ ಅನುಭವಿಸುತ್ತಾರೆ. ವಜ್ರ ಧರಿಸುವ ಮೊದಲು ಜ್ಯೋತಿಷ್ಯರ ಸಲಹೆ ಕೇಳುವುದು ಒಳ್ಳೆಯದು.

ಶುಕ್ರ ಗ್ರಹವನ್ನು ಬಲಪಡಿಸಲು ವಜ್ರವನ್ನು ಧರಿಸಲಾಗುತ್ತದೆ. ವಜ್ರ ಧರಿಸುವುದ್ರಿಂದ ಸುಖ, ಸಮೃದ್ಧಿ ಲಭಿಸುತ್ತದೆ.

ವಜ್ರ ಧರಿಸುವುದ್ರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರೇಮ ಸಂಬಂಧ ಬಲಗೊಳ್ಳುತ್ತದೆ. ವೈವಾಹಿಕ ಜೀವನ ಸಂತೋಷಮಯವಾಗಿರುತ್ತದೆ.

ವಜ್ರವು ವೃಷಭ ರಾಶಿ, ಮಿಥುನ ರಾಶಿ, ಕನ್ಯಾ, ಮಕರ ಮತ್ತು ತುಲಾ ಹಾಗೂ ಕುಂಭ ರಾಶಿ ಮೇಲೆ ಪ್ರಭಾವ ಬೀರುತ್ತದೆ. ಈ ರಾಶಿಯವರಿಗೆ ವಜ್ರ ಶುಭವೆಂದು ಪರಿಗಣಿಸಲಾಗಿದೆ.

ಮೇಷ, ಸಿಂಹ, ವೃಶ್ಚಿಕ, ಧನು ಮತ್ತು ಮೀನ ರಾಶಿಯವರಿಗೆ ವಜ್ರ ಒಳ್ಳೆಯದಲ್ಲ. ವೃಶ್ಚಿಕ ರಾಶಿಯವರು ಅಪ್ಪಿತಪ್ಪಿಯೂ ವಜ್ರವನ್ನು ಧರಿಸಬಾರದು. ಒಂದು ವೇಳೆ ವಜ್ರ ಧರಿಸುವ ಆಸೆಯುಳ್ಳವರು ಅವಶ್ಯಕವಾಗಿ ಜ್ಯೋತಿಷ್ಯ ಶಾಸ್ತ್ರಜ್ಞರ ಸಲಹೆ ಪಡೆಯಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read