ಲಾರಿಯಲ್ಲೇ ಹೃದಯಾಘಾತ; ಮೂರು ದಿನಗಳ ಬಳಿಕ ಚಾಲಕನ ಮೃತದೇಹ ಪತ್ತೆ

ಅಂಗಡಿಗೆ ಸರಕುಗಳನ್ನು ಡೆಲಿವರಿ ನೀಡಲು ಹುಬ್ಬಳ್ಳಿಯಿಂದ ಬಂದಿದ್ದ ಲಾರಿ ಚಾಲಕನೊಬ್ಬ ವಾಹನದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಈತನ ಮೃತ ದೇಹ ಮೂರು ದಿನಗಳ ಬಳಿಕ ಪತ್ತೆಯಾಗಿದೆ.

ಹುಬ್ಬಳ್ಳಿಯ ಮಲ್ಲಿಕಾರ್ಜುನ ಎಂಬವರು ಬುಧವಾರದಂದು ಮನೆ ಮಾಡಿಗೆ ಹೊದಿಸುವ ಶೀಟ್ ಗಳನ್ನು ಲಾರಿಯಲ್ಲಿ ತೀರ್ಥಹಳ್ಳಿಗೆ ತಂದಿದ್ದರು. ಇದನ್ನು ಅನ್ ಲೋಡ್ ಮಾಡಿದ ಬಳಿಕ ಲಾರಿ ಬಾಗಿಲು ಹಾಕಿಕೊಂಡು ಮಲಗಿಕೊಂಡಿದ್ದರು.

ಈ ವೇಳೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿದ್ದು, ಶನಿವಾರದಂದು ಲಾರಿಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಪರಿಶೀಲಿಸಿದ ವೇಳೆ ಮಲ್ಲಿಕಾರ್ಜುನ ಅವರ ಮೃತ ದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read