ಬಾಯಾರಿಕೆ ಉಂಟಾದಾಗ, ಬಿಸಿಲಿನಲ್ಲಿ ಓಡಾಡಿದಾಗ ಎಳನೀರನ್ನು ಕುಡಿಯುತ್ತೇವೆ. ಸತ್ಯವೇನೆಂದರೆ ಋತುವಿನೊಂದಿಗೆ ಯಾವುದೇ ಸಂಬಂಧ ಇಲ್ಲದೇ, ಎಂತಹ ಸಂದರ್ಭದಲ್ಲಿ ಬೇಕಾದರೂ ಸೇವಿಸಬಹುದು. ಅನೇಕ ರೀತಿಯ ಉಪಯೋಗಗಳನ್ನು ಹೊಂದಬಹುದು.
* ಸಾಕಷ್ಟು ಜನರು ಎಳನೀರಿನಿಂದ ನೆಗಡಿ ಉಂಟಾಗುತ್ತದೆ ಎಂದು ಹೇಳುತ್ತಿರುತ್ತಾರೆ. ಸತ್ಯವೇನೆಂದರೆ ಎಳನೀರು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶರೀರದಲ್ಲಿ ಬ್ಯಾಕ್ಟೀರಿಯಾ, ವೈರಸ್ ಗಳನ್ನು ದೂರ ಮಾಡುತ್ತದೆ. ಅನಾರೋಗ್ಯದ ಸಮಸ್ಯೆಗಳು ಎದುರಾಗದಂತೆ ಕಾಪಾಡುತ್ತದೆ.
* ಎಳನೀರಿನಿಂದ ತಕ್ಷಣವೇ ಶಕ್ತಿ ಲಭಿಸುತ್ತದೆ. ಕಡಿಮೆ ಆಹಾರ ಸೇವಿಸಿದರೂ ಉತ್ಸಾಹ ಹೆಚ್ಚಿಸುತ್ತದೆ. ತೂಕ ಕಡಿಮೆ ಮಾಡಿಕೊಳ್ಳ ಬಯಸುವವರು ಎಳನೀರಿಗೆ ಆದ್ಯತೆ ನೀಡಬಹುದು. ಜ್ವರ ಬಂದು ನಿಂತ ಬಳಿಕ ದಣಿವು ಉಂಟಾಗುತ್ತದೆ. ಅಂತಹ ಸಮಯದಲ್ಲಿ ಎಳನೀರನ್ನು ಸೇವಿಸಿದರೆ ಶೀಘ್ರವಾಗಿ ಸುಸ್ತಿನಿಂದ ಮುಕ್ತರಾಗಬಹುದು.
* ದೇಹದಲ್ಲಿರುವ ವ್ಯರ್ಥಗಳನ್ನು ತೊಲಗಿಸುವ ಪ್ರಕ್ರಿಯೆಯಲ್ಲಿ ಎಳನೀರು ಹೆಚ್ಚು ಉಪಯುಕ್ತ. ಕಿಡ್ನಿಯಲ್ಲಿ ಕಲ್ಲು ಇರುವವರಿಗೆ ಉತ್ತಮ ಔಷಧ. ಜೀರ್ಣಶಕ್ತಿಗೆ ಸಂಬಂಧಿಸಿದಂತೆ ತೊಂದರೆ ಎದುರಿಸುವವರು ಈ ನೀರು ಕುಡಿದರೆ ಆರೋಗ್ಯ ಹೆಚ್ಚಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆ ದೂರ ಮಾಡಿ ಮಲಬದ್ಧತೆಯನ್ನು ತಡೆಯುತ್ತದೆ.
* ಎಳನೀರಿಗೆ ಕೊಬ್ಬನ್ನು ಕರಗಿಸುವ ಶಕ್ತಿ ಇದೆ. ಇದರಲ್ಲಿ ಕ್ಯಾಲೋರಿಗಳು ಹೆಚ್ಚಾಗಿರುವುದರಿಂದ ಹೊಟ್ಟೆ ತುಂಬಿದ ಭಾವನೆ ಉಂಟುಮಾಡುತ್ತದೆ. ಇದರಿಂದ ಹಸಿವೆ ಬೇಗ ಆಗದು. ದೇಹದಲ್ಲಿ ತೇವಾಂಶ ಕಡಿಮೆಯಾದಾಗ ತಲೆನೋವು ಉಂಟಾಗುತ್ತದೆ. ಅಂತಹ ಸಮಯದಲ್ಲಿ 2 ಗ್ಲಾಸ್ ಈ ನೀರು ಕುಡಿದರೆ ಫಲಿತಾಂಶ ದೊರೆಯುತ್ತದೆ.
* ತಾಯಿ ಹಾಲಿನಲ್ಲಿರುವ ಕೆಲವು ಪೋಷಕಾಂಶಗಳು ಎಳನೀರಿನಲ್ಲಿ ಇವೆ. ಆದ್ದರಿಂದ ಮಕ್ಕಳಿಗೆ ನೀಡಿದರೆ ಒಳಿತು. ಗರ್ಭಿಣಿಯರು ಎಳನೀರನ್ನು ಕುಡಿಯುವುದರಿಂದ ಶಿಶುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ.