ಅನ್ನ, ಚಪಾತಿಗೆ ಬಿಸಿ ಬಿಸಿಯಾದ ತೊಗರಿ ಬೇಳೆ ತೊವ್ವೆ ಹಾಕಿ ತಿಂದ್ರೆ ಅದ್ರ ರುಚಿಯೇ ಬೇರೆ. ಸುಲಭವಾಗಿ ತೊಗರಿ ತೊವ್ವೆ ಮಾಡಬಹುದು. ಅದು ಹೇಗೆ ಮಾಡೋದು ಅಂತಾ ನಾವು ಹೇಳ್ತೇವೆ ಕೇಳಿ.
ತೊಗರಿ ಬೇಳೆ ತೊವ್ವೆ ಮಾಡಲು ಬೇಕಾಗುವ ಪದಾರ್ಥಗಳು:
ಅರ್ಧ ಕೆ.ಜಿ ತೊಗರಿ ಬೇಳೆ
10 ಹಸಿಮೆಣಸಿನ ಕಾಯಿ
ಒಂದು ಚಮಚ ಕಡಲೇಬೇಳೆ
2 ಚಿಟಕಿ ಅರಿಶಿನ
ನಾಲ್ಕು ಒಣಮೆಣಸಿನ ಕಾಯಿ
ಒಂದು ಚಮಚ ಸಾಸಿವೆ
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ತೊಗರಿಬೇಳೆ ತೊವ್ವೆ ಮಾಡುವ ವಿಧಾನ:
ತೊಗರಿ ಬೇಳೆಯನ್ನು ತೊಳೆದು ಚೆನ್ನಾಗಿ ಬೇಯಿಸಿಕೊಳ್ಳಿ. ಅದಕ್ಕೆ ಕೊತ್ತಂಬರಿ ಸೊಪ್ಪು ಹಾಗೂ ಉಪ್ಪನ್ನು ಹಾಕಿ ತೊಗರಿ ಬೇಳೆಯನ್ನು ಸೌಟಿನ ಸಹಾಯದಿಂದ ಸ್ವಲ್ಪ ಅರೆಯಿರಿ. ಅದನ್ನು ಮತ್ತೆ ಒಲೆ ಮೇಲೆ ಇಡಿ. ಇನ್ನೊಂದು ಕಡೆ ಒಗ್ಗರಣೆಗೆ ಸಾಸಿವೆ, ಹಸಿಮೆಣಸಿನ ಕಾಯಿ, ಒಣ ಮೆಣಸಿನ ಕಾಯಿ, ಕಡಲೇಬೇಳೆ ಹಾಕಿ ಅದನ್ನು ಬೇಳೆಗೆ ಸೇರಿಸಿ. ಮಿಶ್ರಣ ಗಟ್ಟಿಯಾದ ಮೇಲೆ ಕೆಳಗಿಳಿಸಿ. ಬಿಸಿಬಿಸಿ ತೊಗರಿಬೇಳೆ ತೊವ್ವೆ ರೆಡಿ.