ಸಬ್ಬಕ್ಕಿ, ಗೆಣಸು ಬಳಸಿ ತಯಾರಿಸುವ ರುಚಿಕರವಾದ ಕಟ್ಲೆಟ್ ಮಾಡುವ ವಿಧಾನ ಇಲ್ಲಿದೆ. ಸಂಜೆಯ ಸ್ನ್ಯಾಕ್ಸ್ ಗೆ ಇದು ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಸಬ್ಬಕ್ಕಿ (ನೆನೆಸಿದ್ದು), 1 – ಗೆಣಸು (ದೊಡ್ಡದ್ದು), ¼ ಕಪ್ – ತುರಿದ ಸೋರೆಕಾಯಿ(ನೀರು ಹಿಂಡಿಕೊಳ್ಳಿ), 2 ಟೇಬಲ್ ಸ್ಪೂನ್ – ಗೋಡಂಬಿ ಪೌಡರ್, 1 ಟೀ ಸ್ಪೂನ್ – ಚಿಕ್ಕದ್ದಾಗಿ ಹೆಚ್ಚಿಟ್ಟುಕೊಂಡ ಪುದೀನಾ ಎಲೆ, 1 ಟೀ ಸ್ಪೂನ್ – ಜೀರಿಗೆ ಪುಡಿ, ½ ಟೀ ಸ್ಪೂನ್ – ಖಾರದ ಪುಡಿ, ಉಪ್ಪು – ರುಚಿಗೆ ತಕ್ಕಷ್ಟು, 2 – 3 ಟೇಬಲ್ ಸ್ಪೂನ್ – ಎಣ್ಣೆ.
ಮಾಡುವ ವಿಧಾನ:
ಗೆಣಸನ್ನು ಬೇಯಿಸಿಕೊಂಡು ಸಿಪ್ಪೆ ತೆಗೆದು ಮ್ಯಾಶ್ ಮಾಡಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿಕೊಂಡು ಅದಕ್ಕೆ ಸೋರೆಕಾಯಿ, ಗೋಡಂಬಿ ಪೌಡರ್, ಪುದೀನಾ ಎಲೆ, ಜೀರಿಗೆ ಪುಡಿ, ಖಾರದ ಪುಡಿ, ಉಪ್ಪು ಸಬ್ಬಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೈಗೆ ತುಸು ಎಣ್ಣೆ ಸವರಿಕೊಂಡು ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದುಕೊಂಡು ಕಟ್ಲೆಟ್ ಆಕಾರದಲ್ಲಿ ತಟ್ಟಿ. ತವಾಕ್ಕೆ ಎಣ್ಣೆ ಹಾಕಿಕೊಂಡು ಕಟ್ಲೆಟ್ ಅನ್ನು ಅದರಲ್ಲಿ ಹೊಂಬಣ್ಣ ಬರುವವರಗೆ ಹುರಿದು ತೆಗೆಯಿರಿ.