alex Certify ರಾಜಮೌಳಿ ಹೇಳಿದ ಮಾತು ಕೇಳಿ ಭಾವುಕರಾದ ಅಭಿಮಾನಿಗಳು; ಇಲ್ಲಿದೆ ಅದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಮೌಳಿ ಹೇಳಿದ ಮಾತು ಕೇಳಿ ಭಾವುಕರಾದ ಅಭಿಮಾನಿಗಳು; ಇಲ್ಲಿದೆ ಅದರ ವಿಡಿಯೋ

2023 ಗೋಲ್ಡನ್‌ ಗ್ಲೋಬ್ಸ್ ಅವಾರ್ಡ್ RRR ಚಿತ್ರತಂಡಕ್ಕೆ ಸಿಕ್ಕಿದ್ದು, ಭಾರತದ ಪ್ರತಿ ನಾಗರಿಕನು ಹೆಮ್ಮೆ ಪಡುವ ಸಂಗತಿಯಾಗಿತ್ತು. ಸದ್ಯ ಅಮೆರಿಕಾದಲ್ಲಿ ಇರುವ ರಾಜಮೌಳಿ ಆಂಡ್‌ ಟೀಂ, ಈ ಮರೆಯಲಾಗದ ಕ್ಷಣವನ್ನ ತಮ್ಮದೇ ರೀತಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ.

‘ನಾಟು ನಾಟು’ ಹಾಡಿಗೆ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಗೆದ್ದ ಬಳಿಕ ಆರ್‌ಆರ್‌ಆರ್‌ ಮತ್ತೆರಡು ಪ್ರಶಸ್ತಿ ಬಾಚಿಕೊಂಡಿದೆ. RRR ಸಿನಿಮಾ ವಿದೇಶಿ ಭಾಷೆಯ ಸಿನಿಮಾ ವಿಭಾಗದಲ್ಲಿ ವಿಮರ್ಶಕ ಆಯ್ಕೆ ಪ್ರಶಸ್ತಿ ಗೆದ್ದುಕೊಂಡಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರಾಜಮೌಳಿ ಮಾತು ಕೇಳಿ ಅಭಿಮಾನಿಗಳು ಭಾವುಕರಾಗಿ ಹೋಗಿದ್ದಾರೆ.

ಲಾಸ್ ಏಂಜಲೀಸ್‌ನಲ್ಲಿ ಪ್ರಶಸ್ತಿ ಸ್ವೀಕರಿಸಿದ ರಾಜಮೌಳಿ, ತದನಂತರ ಮಾಡಿದ ಭಾಷಣದಲ್ಲಿ ಕೆಲ ಮಾತುಗಳನ್ನ ಹೇಳಿದ್ಧಾರೆ. ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಭಾಷಣದಲ್ಲಿ ನಿರ್ದೇಶದ ರಾಜಮೌಳಿ ‘ಮೇರಾ ಭಾರtf ಮಹಾನ್‌’ ಎಂದು ಹೇಳಿದ್ದಾರೆ.

ಅಷ್ಟೆ ಅಲ್ಲ, ಮಾತು ಮುಂದುವರೆಸಿದ ಎಸ್ ಎಸ್ ರಾಜಮೌಳಿ, ನನ್ನ ಈ ಯಶಸ್ವಿಗೆ ಕಾರಣ ಜೀವನದಲ್ಲಿ ಬಂದಿರುವ ಎಲ್ಲ ಮಹಿಳೆಯರು. ಅಂದರೆ, ನನ್ನ ತಾಯಿ ರಾಜನಂದಿನಿ ಅವರು ನನಗೆ ಕಥೆ ಪುಸ್ತಕ, ಕಾಮಿಕ್ ಗಳನ್ನು ಕೊಟ್ಟು ಓದುವಂತೆ ಹಾಗೂ ನನ್ನ ಸೃಜನಶೀಲತೆಯಿಂದ ಇರಲು ಪ್ರೋತ್ಸಾಹಿಸಿದರು. ಇನ್ನೂ ನನ್ನ ಸಹೋದರನ ಪತ್ನಿ ಶ್ರೀವಲ್ಲಿ ಅವರು ನನಗೆ ತಾಯಿಯಿದ್ದಂತೆ. ಅವರೂ ಸದಾ ನನ್ನ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ್ದಾರೆ“ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ‘ನನ್ನ ಹೆಂಡತಿ ರಮಾ ನನ್ನ ಚಿತ್ರಗಳ ವಸ್ತ್ರ ವಿನ್ಯಾಸಕಿ. ಆದರೆ ಅದಕ್ಕಿಂತ ಹೆಚ್ಚಾಗಿ ಅವಳು ನನ್ನ ಜೀವನದ ವಿನ್ಯಾಸಕಿ. ಅವಳು ಇಲ್ಲದಿದ್ದರೆ ನಾನು ಇಂದು ಇಲ್ಲಿ ಇರುತ್ತಿರಲಿಲ್ಲ. ನನ್ನ ಮಕ್ಕಳು ಅವರು ಏನನ್ನೂ ಮಾಡುವುದಿಲ್ಲ, ಆದರೆ ನನ್ನ ಬದುಕನ್ನು ಬೆಳಗಿಸಲು ಅವರ ನಗು ಸಾಕು’ ಎಂದು ಅವರು ಭಾವುಕರಾಗಿ ಹೇಳಿದರು. ‘ಅಂತಿಮವಾಗಿ ನನ್ನ ತಾಯಿನಾಡು, ಭಾರತ, ಇಂಡಿಯಾ, ಮೇರಾ ಭಾರತ್ ಮಹಾನ್. ಜೈ ಹಿಂದ್. ಧನ್ಯವಾದಗಳು’ ಎಂದು ಹೇಳಿದರು.

— RRR Movie (@RRRMovie) January 16, 2023

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...