ಮೇಷ: ವೃತ್ತಿರಂಗದಲ್ಲಿ ಏಳ್ಗೆ ಕಾಣಲಿದ್ದೀರಿ. ಸಂಬಳ ಏರಿಕೆ ಇಲ್ಲವೇ ಹುದ್ದೆಯಲ್ಲಿ ಬಡ್ತಿ ಸಿಗುವ ಬಗ್ಗೆ ಸೂಚನೆ ಸಿಗಲಿದೆ. ವ್ಯಾಪಾರಿಗಳಿಗೂ ಲಾಭ ಕಾದಿದೆ. ಕುಟುಂಬಸ್ಥರ ಜೊತೆ ತಾಳ್ಮೆಯಿಂದ ವರ್ತಿಸಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ವೃಷಭ : ವಿದ್ಯಾರ್ಥಿಗಳಿಗೆ ನಿರಾಸೆಯಾಗುವ ಸಾಧ್ಯತೆ ಇದೆ. ಹಿಡಿದ ಕೆಲಸ ಕೈಗೂಡಲಿಲ್ಲ ಎಂಬ ಕಾರಣಕ್ಕೆ ಪ್ರಯತ್ನ ಮಾಡೋದನ್ನ ನಿಲ್ಲಿಸದಿರಿ. ಕೆಲಸದ ವಿಚಾರವಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಕುಲದೇವತೆಯನ್ನ ಆರಾಧನೆ ಮಾಡಿ.
ಮಿಥುನ : ವ್ಯಾಪಾರ, ಉದ್ಯಮದಲ್ಲಿ ಇರುವವರಿಗೆ ಇಂದು ನಷ್ಟ ಕಾದಿದೆ. ಕ್ಷುಲ್ಲಕ ವಿಚಾರಕ್ಕೆ ಸಂಗಾತಿಯೊಡನೆ ಜಗಳ ಮಾಡೋದನ್ನ ನಿಲ್ಲಿಸಿ. ಕಚೇರಿಯಲ್ಲಿ ಸಮಾಧಾನ ಇರಲಿದೆ. ವೈದ್ಯಕೀಯ ರಂಗದವರಿಗೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ಕಟಕ : ಮನೆಯಲ್ಲಿ ಸಂತಾನ ಭಾಗ್ಯದ ಸುದ್ದಿಯನ್ನ ಕೇಳಲಿದ್ದೀರಿ. ಕಚೇರಿಯಲ್ಲಿ ಹೆಚ್ಚಿದ ಒತ್ತಡದಿಂದಾಗಿ ಮಾನಸಿಕವಾಗಿ ದಣಿಯಲಿದ್ದೀರಿ. ಮನೆಯಲ್ಲಿ ಶಾಂತಿ ಇರಲಿದೆ. ಸಂಗಾತಿಯೊಡನೆ ನಿಮ್ಮ ಕಷ್ಟವನ್ನ ಹೇಳಿಕೊಳ್ಳಿ. ಸಮಾಧಾನ ಸಿಗಲಿದೆ.
ಸಿಂಹ : ನಿಮ್ಮ ಕೆಲಸವನ್ನ ನೀವು ಶ್ರದ್ಧೆಯಿಂದ ಮಾಡಿ. ಫಲಿತಾಂಶ ನಿಮ್ಮ ಪರವಾಗಿ ಬರಲಿದೆ. ಧನಾಗಮನದ ನಿರೀಕ್ಷೆ ಇದೆ. ಹಳೆಯ ಸಾಲಗಳು ತೀರೋದ್ರಿಂದ ಮನಸ್ಸಿಗೆ ನೆಮ್ಮದಿ ಇರಲಿದೆ. ಪೋಷಕರ ಆರೋಗ್ಯದ ಕಡೆ ಲಕ್ಷ್ಯ ವಹಿಸಿ.
ಕನ್ಯಾ : ನಿಮ್ಮ ಮುಂದೆ ಇರುವ ಅವಕಾಶವನ್ನ ಸರಿಯಾಗಿ ಬಳಸಿಕೊಳ್ಳಿ. ಯಾರ ಕೊಂಕು ಮಾತಿಗೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆರೋಗ್ಯದ ಬಗ್ಗೆ ಕಾಳಜಿಯನ್ನ ವಹಿಸಿ. ದೂರ ಪ್ರಯಾಣವನ್ನ ಮುಂದೂಡಿದಷ್ಟೂ ಒಳ್ಳೆಯದು.
ತುಲಾ : ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡಲಿದ್ದೀರಿ. ಕೆಲಸಕ್ಕಾಗಿ ಅರಸುತ್ತಿರುವವರಿಗೆ ಖಂಡಿತವಾಗಿಯೂ ಶುಭ ಸುದ್ದಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಾದಿದೆ. ಮನೆಯ ಕಿರಿಯ ಸದಸ್ಯರಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಿ.
ವೃಶ್ಚಿಕ : ವ್ಯಾಪಾರಿಗಳಿಗೆ ಈ ದಿನ ಉತ್ತಮವಲ್ಲ. ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ವಿಘ್ನ ಎದುರಾಗುವ ಸಾಧ್ಯತೆ ಇದೆ. ಒತ್ತಡ ಎದುರಾಗಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹನುಮಾನ್ ಚಾಲೀಸಾ ಪಠಿಸಿ.
ಧನು : ಧನಾಗಮನ ಸಾಮಾನ್ಯವಾಗಿ ಇರಲಿದೆ. ಕೋಪದ ಕೈಗೆ ಎಂದಿಗೂ ಬುದ್ಧಿ ಕೊಡಬೇಡಿ. ಮಕ್ಕಳ ಒತ್ತಡಕ್ಕೆ ಮಣಿದು ದುಬಾರಿ ವಸ್ತುವನ್ನ ಖರೀದಿ ಮಾಡಲಿದ್ದೀರಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ.
ಮಕರ : ಸಾಂಸಾರಿಕ ಜೀವನ ಸುಖಮಯವಾಗಿ ಇರಲಿದೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ಸಿಗಲಿದೆ. ಸರ್ಕಾರಿ ನೌಕರರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಜಾಗ್ರತಿ ಇರಲಿ. ಕುಲದೇವತೆಯನ್ನ ಪ್ರಾರ್ಥಿಸಿ.
ಕುಂಭ : ಒತ್ತಡ ನಡುವೆ ಆತ್ಮೀಯರು ನೀಡುವ ಸಾಂತ್ವನ ನಿಮಗೆ ಸಾಕಷ್ಟು ಆತ್ಮವಿಶ್ವಾಸವನ್ನ ತುಂಬಲಿದೆ. ಮನೆಯಲ್ಲಿ ಶಾಂತಿ ಹಾಳಾಗಲು ನೀವೇ ಕಾರಣವಾಗುವ ಸಾಧ್ಯತೆ ಇದೆ. ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಸಣ್ಣ ವಿವಾದ ಏರ್ಪಡಬಹುದು. ತಾಳ್ಮೆಯನ್ನ ಕಳೆದುಕೊಳ್ಳಬೇಡಿ.
ಮೀನ : ವ್ಯಾಪಾರ – ವ್ಯವಹಾರ ನಡೆಸುವವರಿಗೆ ಇಂದು ಮಿಶ್ರಫಲ ಕಾದಿದೆ. ಬೆಳಗ್ಗೆಯಿಂದ ನಷ್ಟ ಎದುರಾದರೂ ಸಹ ದಿನದ ಅಂತ್ಯದಲ್ಲಿ ಧನಲಾಭವಿದೆ. ಆಸ್ತಿ ವ್ಯಾಜ್ಯಗಳಿಂದಾಗಿ ಕೋರ್ಟ್ – ಕಚೇರಿ ಎಂದು ಅಲೆಯಬೇಕಾಗಿ ಬರಬಹುದು. ಸಂಸಾರದಲ್ಲಿ ನೆಮ್ಮದಿ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.