
ವ್ಯಕ್ತಿಯ ಜೀವನದಲ್ಲಿ ಬೇರೆಯವರಿಗೆ ಹೇಳಬಾರದ ಕೆಲವು ರಹಸ್ಯಗಳಿರುತ್ತವೆ. ಅದನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬಾರದು. ಹಂಚಿಕೊಂಡಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಆ ರಹಸ್ಯಗಳ ಬಗ್ಗೆ ನೀವು ತಿಳಿದಿದ್ದರೆ ನಿಮಗೆ ಎಂದೂ ಸಮಸ್ಯೆ ಬರುವುದಿಲ್ಲ.
ಗುರು ಮಂತ್ರವನ್ನು ಯಾರಿಗೂ ಹೇಳಬಾರದು. ಅದನ್ನು ಯಾವಾಗ್ಲೂ ಗುಪ್ತವಾಗಿಡಬೇಕು. ರಹಸ್ಯವಾಗಿದ್ದರೆ ಮಾತ್ರ ಗುರು ಮಂತ್ರ ಸಿದ್ಧಿಯಾಗುತ್ತದೆ.
ಶಾಸ್ತ್ರದಲ್ಲಿ ರಹಸ್ಯ ದಾನಕ್ಕೆ ಮಹತ್ವವಿದೆ. ರಹಸ್ಯವಾಗಿ ದಾನ ಮಾಡಿದವರಿಗೆ ಅಕ್ಷಯ ಪುಣ್ಯ ಪ್ರಾಪ್ತಿಯಾಗುತ್ತದೆ. ದೇವಾನುದೇವತೆಗಳ ಕೃಪೆಯಿರುತ್ತದೆ.
ಸಾಮಾನ್ಯವಾಗಿ ಬಹುತೇಕರು ತಮ್ಮ ವಯಸ್ಸನ್ನು ಹೇಳುವುದಿಲ್ಲ. ಬೇರೆಯವರಿಂದ ತಮ್ಮ ವಯಸ್ಸನ್ನು ರಹಸ್ಯವಾಗಿಡುತ್ತಾರೆ. ಬೇರೆಯವರ ಮುಂದೆ ವಯಸ್ಸನ್ನು ರಹಸ್ಯವಾಗಿಡುವ ಬದಲು ನಮ್ಮಿಂದ ನಮ್ಮ ವಯಸ್ಸನ್ನು ಮುಚ್ಚಿಡಬೇಕು. ವಯಸ್ಸು ನಮ್ಮ ಸಾಧನೆಗೆ ಅಡ್ಡಿಯಾಗಬಾರದು.
ಕೆಲವು ಮದ್ದುಗಳ ಬಗ್ಗೆ ಬೇರೆಯವರಿಗೆ ಹೇಳಬಾರದು. ಈ ಔಷಧಿಗಳ ರಹಸ್ಯ ಹೇಳಿದ್ರೆ ಔಷಧಿ ಗುಣ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಹಾಗೆ ಔಷಧಿಯನ್ನು ಗಾಢವಾದ ಬೆಳಕು ಹಾಗೂ ಶಾಖದಿಂದಲೂ ದೂರವಿಡಬೇಕು.