alex Certify ಮೊಬೈಲ್ ಚಟದಿಂದ ಕಾಡಬಹುದು ಮಾನಸಿಕ ಅಸ್ವಸ್ಥತೆ; ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಚಟದಿಂದ ಕಾಡಬಹುದು ಮಾನಸಿಕ ಅಸ್ವಸ್ಥತೆ; ನಿಮಗೆ ತಿಳಿದಿರಲಿ ಈ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನ ಮಕ್ಕಳು ಮತ್ತು ವೃದ್ಧರು ಹೆಚ್ಚು ಸಮಯವನ್ನು ಮೊಬೈಲ್ ಫೋನ್‌ಗಳಲ್ಲಿ ಕಳೆಯುತ್ತಿದ್ದಾರೆ. ಆದರೆ ಇದು ಎಷ್ಟು ಅಪಾಯಕಾರಿ ಎಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಗಂಟೆಗಟ್ಟಲೆ ಮೊಬೈಲ್‌ಗೆ  ಅಂಟಿಕೊಂಡಿರುವ ಚಟ ಜನರನ್ನು ಮಾನಸಿಕ ಅಸ್ವಸ್ಥರನ್ನಾಗಿಸುತ್ತಿದೆ.

ಇದು ನಿದ್ರೆಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ತಲೆನೋವು, ಮೈಗ್ರೇನ್ ದಾಳಿಯ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಹೆಚ್ಚು ಮೊಬೈಲ್ ನೋಡುವುದರಿಂದಲೇ ಚಿಕ್ಕಂದಿನಲ್ಲೇ ಮುಪ್ಪು ನಮ್ಮನ್ನು ಆವರಿಸುತ್ತದೆ. ಚರ್ಮದಿಂದ ಹೊರಬರುವ ನೀಲಿ ಕಿರಣಗಳು, ಚರ್ಮ ಮತ್ತು ಕಣ್ಣುಗಳೆರಡನ್ನೂ ಬಹಳವಾಗಿ ಹಾಳು ಮಾಡುತ್ತಿವೆ. ಮೊಬೈಲ್‌ನ ಅಪಾಯಕಾರಿ ವಿಕಿರಣವು ಥೈರಾಯ್ಡ್ ಜೊತೆಗೆ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತಿದೆ.  

ಫೋನ್ ಅನ್ನು 30 ನಿಮಿಷಗಳಿಗಿಂತ ಹೆಚ್ಚು ಬಳಸಬಾರದು

ಮೊಬೈಲ್‌ ಫೋನ್‌ ಅನ್ನು 30 ನಿಮಿಷಗಳಿಗಿಂತ ಹೆಚ್ಚು ಕಾಲ ಬಳಸುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತಿದೆ ಎಂಬುದು ಹಲವು ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಅಲ್ಲದೆ ನಿತ್ಯ ವಿಡಿಯೊ ಗೇಮ್ ಆಡುವ ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಅಸ್ವಸ್ಥರಾಗುತ್ತಾರೆ. ಯಾವುದೇ ವಯಸ್ಸಿನ ವ್ಯಕ್ತಿಯಾದರೂ ಮೊಬೈಲ್‌ನಿಂದ  ದೂರವಿರಬೇಕು. ಇದು ಡಿಜಿಟಲ್ ಡಿಟಾಕ್ಸಿಂಗ್ ಆಗಿದೆ. ಒಬ್ಬ ವ್ಯಕ್ತಿಯು ಎಷ್ಟು ಸಮಯದವರೆಗೆ ಮೊಬೈಲ್ ಬಳಸಬೇಕು ಎಂದು ತಿಳಿದಿರಬೇಕು. ಅದಕ್ಕೆ ತಕ್ಕಂತೆ ಮಿತವಾಗಿ ಮೊಬೈಲ್‌ ಬಳಸಬೇಕು.

ಅತಿಯಾದ ಮೊಬೈಲ್ ಬಳಕೆಯಿಂದ ಆರೋಗ್ಯವೂ ಹದಗೆಡಬಹುದು. ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆಯಿಂದ ವಿಷನ್‌  ಸಿಂಡ್ರೋಮ್, ಕಣ್ಣುಗಳ ದೌರ್ಬಲ್ಯ, ಶುಷ್ಕತೆ, ಕಣ್ಣುರೆಪ್ಪೆಗಳಲ್ಲಿ ಊತ, ಕಣ್ಣು ಕೆಂಪಗಾಗುವುದು, ಪ್ರಕಾಶಮಾನವಾದ ಬೆಳಕಿನಿಂದ ಕಣ್ಣಿನಲ್ಲಿ ನೋವು, ಕಣ್ಣು ಮಿಟುಕಿಸುವಲ್ಲಿ ಸಮಸ್ಯೆ ಸೇರಿದಂತೆ ಅನೇಕ ರೀತಿಯ ತೊಂದರೆಗಳಾಗುತ್ತವೆ.  ಸ್ಮಾರ್ಟ್‌ಫೋನ್‌ಗಳಿಂದ ಹೊರಹೊಮ್ಮುವ ನೀಲಿ ಬೆಳಕು ರೆಟಿನಾಗೆ  ಹಾನಿ ಮಾಡುತ್ತದೆ. ಇದರಿಂದ ದೃಷ್ಟಿಹೀನತೆ ಉಂಟಾಗಬಹುದು. ಸ್ಮಾರ್ಟ್ ಫೋನ್ ಮಾನಸಿಕವಾಗಿ ನಿಮ್ಮನ್ನು ಅಸ್ವಸ್ಥಗೊಳಿಸುತ್ತದೆ. ದೃಷ್ಟಿ ದುರ್ಬಲವಾಗುತ್ತದೆ. ಏಕಾಗ್ರತೆಯ ಕೊರತೆ, ಬೊಜ್ಜು, ಕಣ್ಣುಗಳಲ್ಲಿ ಅಡಚಣೆಗಳನ್ನು ಉಂಟು ಮಾಡುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...