ಮದುವೆಗೆ ಸಂಬಂಧಿಸಿದಂತೆ ಪ್ರತಿಯೊಂದು ಸಮಾಜದಲ್ಲಿ ವಿಭಿನ್ನ ಆಚರಣೆಗಳು ಮತ್ತು ಪದ್ಧತಿಗಳು ಕಂಡುಬರುತ್ತವೆ. ಕೆಲವೊಮ್ಮೆ ಈ ಆಚರಣೆಗಳು ಬಹಳ ವಿಚಿತ್ರವಾಗಿರುತ್ತವೆ. ಮದುವೆಗೂ ಮುನ್ನ ಲಿವ್ ಇನ್ ರಿಲೇಶನ್ ಶಿಪ್ ಸರಿಯೋ ತಪ್ಪೋ ಎಂಬ ಚರ್ಚೆ ಇತ್ತೀಚೆಗೆ ನಡೆಯುತ್ತಿದೆ.
ಮದುವೆಗೂ ಮೊದಲೇ ಯುವತಿಯರು ಮಕ್ಕಳನ್ನು ಹೆರಬೇಕು ಎಂಬ ವಿಚಿತ್ರ ಕಟ್ಟುಪಾಡು ಕೂಡ ಭಾರತದಲ್ಲಿದೆ. ಭಾರತದ ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನಲ್ಲಿರುವ ಬುಡಕಟ್ಟು ಜನಾಂಗವೊಂದರಲ್ಲಿ ಈ ವಿಲಕ್ಷಣ ಪದ್ಧತಿ ಜಾರಿಯಲ್ಲಿದೆ.
ಈ ಬುಡಕಟ್ಟು ಜನಾಂಗವನ್ನು ಟೊಟೊ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ಮದುವೆಗೂ ಮುನ್ನ ಹುಡುಗಿಯರು ತಮ್ಮ ಇಷ್ಟದ ಹುಡುಗನ ಜೊತೆ ಬದುಕಲು ಶುರು ಮಾಡುತ್ತಾರೆ. ನಂತರ ಅವರು ಗರ್ಭಿಣಿಯಾಗಿ ಮಕ್ಕಳನ್ನು ಹೆರಬೇಕು. ಮಗು ಹುಟ್ಟಿದ ಬಳಿಕ ಆಕೆಗೆ ಮದುವೆ ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿ 2 ವರ್ಷಗಳಿಗೊಮ್ಮೆ ಮೇಳವನ್ನು ಆಯೋಜಿಸಲಾಗುತ್ತದೆ. ಅಲ್ಲಿ ಹುಡುಗಿ ತನಗೆ ಇಷ್ಟವಾದ ಹುಡುಗನನ್ನು ಆಯ್ಕೆ ಮಾಡಿಕೊಳ್ಳಬಹುದು. ನಂತರ ಆಕೆ ಅವನೊಂದಿಗೆ ವಾಸಿಸಲು ಪ್ರಾರಂಭಿಸುತ್ತಾಳೆ.
ಈ ಸಂಬಂಧದ ಸಮಯದಲ್ಲಿ, ಮಗು ಹುಟ್ಟುವವರೆಗೆ ಸಂಗಾತಿಗಳಿಬ್ಬರೂ ಮದುವೆಯ ಬಗ್ಗೆ ಯೋಚಿಸುವುದಿಲ್ಲ. ಇದಾದ ನಂತರ ಒಂದು ಮಗು ಹುಟ್ಟಿದ ಬಳಿಕವೂ ಆ ಹುಡುಗನನ್ನು ಮದುವೆಯಾಗಬೇಕೋ ಬೇಡವೋ ಎಂಬುದು ಹುಡುಗಿಗೆ ಬಿಟ್ಟ ವಿಚಾರ. ಮಗು ಹುಟ್ಟಿದ ನಂತರವೂ ಆಕೆ ಬೇರೊಬ್ಬ ಹುಡುಗನನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸ್ವಾತಂತ್ರ್ಯ ಆಕೆಗಿದೆ. ಸಮುದಾಯದಲ್ಲಿ ಮಗು ಹುಟ್ಟಿದ ನಂತರ ಕೂಡ ಮದುವೆ ಮಾಡಿಕೊಳ್ಳುವಂತೆ ಹುಡುಗಿ ಅಥವಾ ಹುಡುಗನ ಮೇಲೆ ಒತ್ತಡ ಹೇರುವುದಿಲ್ಲ.