ವಯಸ್ಸಾಗ್ತಾ ಹೋದಂತೆ ಮೂಳೆಗಳಲ್ಲಿನ ಸ್ವಾಧೀನ ಕಡಿಮೆಯಾಗುತ್ತಾ ಹೋಗುತ್ತೆ. ಬಾಲ್ಯದಿಂದ ಯೌವ್ವನದವರೆಗೆ ಈ ಮೂಳೆಯ ಸಮಸ್ಯೆ ನಮ್ಮ ಗಮನೆಗೆ ಬರೋದಿಲ್ಲ. ಆದರೆ ಯಾವಾಗ ನಮ್ಮ ವಯಸ್ಸು ಮೂವತ್ತನ್ನ ದಾಟುತ್ತೋ ಒಂದೊಂದೆ ಸಮಸ್ಯೆಗಳು ಶುರುವಾಗುತ್ತಾ ಹೋಗುತ್ತೆ. ಆದರೆ ನಿಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನ ತರೋದ್ರಿಂದ ದೇಹದ ಮೂಳೆಯಲ್ಲಿನ ಶಕ್ತಿಯನ್ನ ಹೆಚ್ಚಿಸಬಹುದಾಗಿದೆ.
ಸಾಧ್ಯವಾದಷ್ಟು ತರಕಾರಿಗಳನ್ನ ಸೇವಿಸಿ : ತರಕಾರಿಗಳಲ್ಲಿ ವಿಟಾಮಿನ್ ಸಿ ಅಂಶ ಹೆಚ್ಚಾಗಿ ಇರೋದ್ರಿಂದ ಮೂಳೆಯ ಆರೋಗ್ಯವನ್ನ ಕಾಪಾಡುತ್ತವೆ. ಅಲ್ಲದೇ ತರಕಾರಿಯಲ್ಲಿ ಸಿಗುವ ಖನಿಜಾಂಶಗಳು ಕೂಡ ಮೂಳೆಯ ಸ್ವಾಧೀನವನ್ನ ಹೆಚ್ಚಿಸಬಲ್ಲವು.
ವ್ಯಾಯಾಮ : ದೇಹವನ್ನ ದಂಡಿಸಬಲ್ಲ ಕಸರತ್ತುಗಳು ಮೂಳೆಗಳನ್ನ ಬಲಪಡಿಸಲು ಸಹಕಾರಿ. ಅಲ್ಲದೇ ಹೊಸ ಮೂಳೆಯ ರಚನೆಯನ್ನೂ ಉತ್ತೇಜಿಸುತ್ತವೆ. ದೇಹದಂಡನೆಯಿಂದಾಗಿ ಖನಿಜ ಸಾಂದ್ರತೆ ಹೆಚ್ಚಾಗೋದ್ರಿಂದ ಮೂಳೆಗಳಲ್ಲೂ ಶಕ್ತಿ ಹೆಚ್ಚುತ್ತದೆ.
ಪೋಶಕಾಂಶಯುಕ್ತ ಆಹಾರ ಸೇವನೆ : ಮೂಳೆಗಳು 50 ಪ್ರತಿಶತ ಪ್ರೋಟಿನ್ಗಳಿಂದಲೇ ನಿರ್ಮಾಣವಾಗಿರುತ್ತವೆ. ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗೋದು ಕಡಿಮೆಯಾಗುತ್ತದೆ. ಇದರಿಂದಾಗಿ ಮೂಳೆ ಬಹುಬೇಗನೇ ತುಂಡಾಗೋದಿಲ್ಲ.
ಕ್ಯಾಲ್ಶಿಯಂಯುಕ್ತ ಆಹಾರ : ಕ್ಯಾಲ್ಶಿಯಂ ಅಂಶ ಮೂಳೆಗೆ ಬೇಕೆ ಬೇಕು. ಹೀಗಾಗಿ ಮೂಳೆಗಳ ಆರೋಗ್ಯಕ್ಕಾಗಿ ನಿತ್ಯದ ಆಹಾರ ಕ್ರಮದಲ್ಲಿ ಕ್ಯಾಲ್ಶಿಯಂಯುಕ್ತ ಪದಾರ್ಥವನ್ನ ಸೇವಿಸಲೇಬೇಕು. ಕ್ಯಾಲ್ಶಿಯಂ ಮಾತ್ರೆಗಳನ್ನ ಸೇವಿಸೋದಕ್ಕಿಂತ ಆಹಾರ ಪದಾರ್ಥಗಳಲ್ಲಿ ನೈಸರ್ಗಿಕವಾಗಿ ಸಿಗುವ ಕ್ಯಾಲ್ಶಿಯಂ ಅಂಶ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ವಿಟಾಮಿನ್ ಡಿ : ವಿಟಾಮಿನ್ ಡಿ ದೇಹದಲ್ಲಿ ಕ್ಯಾಲ್ಶಿಯಂ ಅಂಶವನ್ನ ಹೆಚ್ಚಿಗೆ ಮಾಡಲು ಸಹಕಾರಿ. ಯಾವ ಮಕ್ಕಳು ಹಾಗೂ ವಯಸ್ಕರ ದೇಹದಲ್ಲಿ ವಿಟಾಮಿನ್ ಡಿ ಅಂಶ ಹೇರಳವಾಗಿ ಇರುತ್ತದೋ ಅಂತವರ ಮೂಳೆಗಳು ದುರ್ಬಲವಾಗಿ ಇರೋದು ಅತೀ ವಿರಳ . ಮೀನು ಹಾಗೂ ಮಾಂಸಗಳಲ್ಲಿ ನಿಮಗೆ ವಿಟಾಮಿನ್ ಡಿ ಅಂಶ ಹೆಚ್ಚಾಗಿ ಸಿಗುತ್ತೆ.
ಕ್ಯಾಲರಿಯುಕ್ತ ಆಹಾರವನ್ನ ಸಂಪೂರ್ಣವಾಗಿ ತ್ಯಜಿಸದಿರಿ : ತೂಕ ಕಡಿಮೆ ಮಾಡಬೇಕು ಅಂತಾ ಬಹಳಷ್ಟು ಮಂದಿ ಕ್ಯಾಲರಿಯುಕ್ತ ಆಹಾರವನ್ನ ಸೇವಿಸೋದೇ ಇಲ್ಲ. ಆದರೆ ಬಲಶಾಲಿ ಮೂಳೆಗಳನ್ನ ಪಡೆಯಬೇಕು ಅಂದರೆ ಪ್ರೋಟಿನ್, ವಿಟಮಿನ್ಗಳಿರುವ ಆಹಾರ ಸೇವಿಸಬೇಕು. ಹೀಗಾಗಿ ನಿತ್ಯ 1200 ಕ್ಯಾಲರಿಯುಕ್ತ ಆಹಾರ ದೇಹಕ್ಕೆ ಹೋಗಲೇಬೇಕು.