ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸತು ಎನಿಸುತ್ತದೆ. ಆದರೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ ಎಂದು ಕರೆಯುತ್ತಾರೆ.
ಇದನ್ನು ಸಾರಿನಲ್ಲಿ ಕೆಲವರು ಬಳಸುವುದುಂಟು. ಈ ಬೀಜಗಳನ್ನು ಒಣಗಿಸಿ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪ್ರಮುಖವಾಗಿ ಚೀನಿಯರು ಈ ಬೀಜಗಳಿಂದ ತಮ್ಮ ಸಾಂಪ್ರಾದಾಯಿಕ ಔಷಧಗಳನ್ನು ತಯಾರಿಸುತ್ತಾರೆ.
ಈ ಬೀಜಗಳಿಂದ ಸಾಕಷ್ಟು ಪೋಷಕಗಳು ಲಭ್ಯವಾಗುತ್ತವೆ. ಇವುಗಳಲ್ಲಿ ಪ್ರೋಟೀನ್ ನೊಂದಿಗೆ ಮೆಗ್ನೀಶಿಯಂ, ಪೊಟಾಶಿಯಂ, ಫಾಸ್ಪರಸ್ ನಂತಹ ಖನಿಜಗಳು, ಐರನ್, ಜಿಂಕ್ ನಂತಹ ಲೋಹ ಧಾತುಗಳು ಪುಷ್ಕಳವಾಗಿ ಇರುತ್ತವೆ.
ಈ ಬೀಜಗಳಲ್ಲಿ ಎಲ್ ಐ ಸೋಯಾಸ್ಪರೆಲ್ ಮಿಥೈಲ್ ಟ್ರಾನ್ಸ್ ಫೆರೇಜ್ ಎಂಬ ಎಂಜೈಮ್ ಇದೆ. ಇದು ನಮ್ಮಲ್ಲಿ ಬಲಹೀನವಾದ ಕಣಜಾಲವನ್ನು ತುಂಬಾ ವೇಗವಾಗಿ ರಿಪೇರಿ ಮಾಡುತ್ತದೆ. ಅದರಿಂದಾಗಿಯೇ ಇವುಗಳನ್ನು ತಿನ್ನುವವರು ಬಹಳಷ್ಟು ಕಾಲ ಯೌವನದ ಹುಮ್ಮಸ್ಸನ್ನು ಹೊಂದಿರುತ್ತಾರೆ.
ಲೋಟಸ್ ಬೀಜಗಳಲ್ಲಿನ ಈ ಗುಣದ ಕಾರಣದಿಂದಾಗಿ ಬಹಳಷ್ಟು ಕಾಸ್ಮೆಟಿಕ್ ಕಂಪನಿಗಳು ಸಿದ್ಧಪಡಿಸುವ ಔಷಧಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ಕಾಳುಗಳಲ್ಲಿ ಲಭ್ಯವಾಗುವ ಕಿಂಪ್ ಫೆರಾಲ್ ಎಂಬ ಫ್ಲೇವನಾಯ್ಡ್ ಪೋಷಕವು ದವಡೆಯಲ್ಲಿ ಉಂಟಾಗುವಂತಹ ನೋವು, ಬಾವು, ಉರಿಯನ್ನು ಸಮರ್ಥವಾಗಿ ನಿವಾರಿಸಿ ದಂತಗಳ ಆರೋಗ್ಯ ಚೆನ್ನಾಗಿರುವಂತೆ ಮಾಡುತ್ತದೆ.
ಅದಕ್ಕಾಗಿಯೇ ದೀರ್ಘಕಾಲದ ಯೌವನ ಮತ್ತು ದಂತಗಳ ಆರೋಗ್ಯ ಉತ್ತಮವಾಗಿರಬೇಕು ಎಂದರೆ ಕಮಲದ ಬೀಜಗಳನ್ನು ಉಪಯೋಗಿಸುವುದು ಒಳಿತು.