ವಯಸ್ಸು ಹೆಚ್ಚಾಗ್ತಿದೆ. ಆದ್ರೆ ಮದುವೆ ಮಾತ್ರ ಆಗ್ತಿಲ್ಲ. ಮದುವೆಗೆ ಅನೇಕ ಅಡೆತಡೆಗಳು ಎದುರಾಗುತ್ತವೆ. ಕೆಲವೊಮ್ಮೆ ಜೀವನ ಸಂಗಾತಿಯಿಂದ ಸುಖ ಪ್ರಾಪ್ತಿಯಾಗುವುದಿಲ್ಲ. ಗಂಡ-ಹೆಂಡತಿ ಮಧ್ಯೆ ಗಲಾಟೆ ನಡೆಯುತ್ತದೆ. ಸರಿ ಹೊಂದುವ ಜೀವನ ಸಂಗಾತಿ ಸಿಕ್ಕಾಗ ಮಾತ್ರ ದಾಂಪತ್ಯದಲ್ಲಿ ಸುಖವಿರುತ್ತದೆ.
ಮದುವೆಗೆ ಅಡ್ಡಿಯುಂಟಾಗಲು ಹಾಗೂ ಕೆಟ್ಟ ಜೀವನ ಸಂಗಾತಿ ಸಿಗಲು ಅನೇಕ ಕಾರಣಗಳಿವೆ.
ಹಿಂದಿನ ಜನ್ಮದ ಪಾಪ. ಜಾತಕದಲ್ಲಿ ಪಿತೃದೋಷ ಕಾಡಿದ್ರೆ, ಪುರುಷರ ಜಾತಕದಲ್ಲಿ ಶುಕ್ರ ದುರ್ಬಲವಾಗಿದ್ದರೆ, ಪಾಪ ಕರ್ಮದಿಂದ ಸಂಪತ್ತು ಪ್ರಾಪ್ತಿಯಾಗಿದ್ದರೆ, ಹಿರಿಯರಿಂದ ಸಿಕ್ಕ ಹಣವನ್ನು ಕೆಟ್ಟದಾಗಿ ಬಳಸಿದ್ದರೆ, ಪರ ಸ್ತ್ರೀಯನ್ನು ಕೆಟ್ಟದಾಗಿ ನೋಡಿದ್ರೆ, ಸ್ವಭಾವ ಧಾರ್ಮಿಕವಾಗಿಲ್ಲವಾದ್ರೆ, ಬೇರೆಯವರಿಗೆ ನೋವುಂಟು ಮಾಡಿದ್ರೆ ಈ ಸಮಸ್ಯೆ ಕಾಡುತ್ತದೆ.
ಒಳ್ಳೆ ಸಂಗಾತಿ ಪ್ರಾಪ್ತಿಗೆ ಏಳು ಮುಖದ ಗೌರಿ-ಶಂಕರ ರುದ್ರಾಕ್ಷಿಯನ್ನು ಧರಿಸಿ. ಐದು-ಆರು ಮುಖವಿರುವ ಜೋಡು ರುದ್ರಾಕ್ಷಿಯಲ್ಲೂ ಒಂದು ಗೌರಿ ಹಾಗೂ ಇನ್ನೊಂದು ಶಂಕರನಾಗಿರುತ್ತಾನೆ. ಇಬ್ಬರು ಕೃಪೆ ತೋರಿದ್ರೆ ಮಾತ್ರ ವೈವಾಹಿಕ ಜೀವನ ಸುಖಕರವಾಗಿರುತ್ತದೆ.
ಗೌರಿ-ಶಂಕರ ರುದ್ರಾಕ್ಷಿಯನ್ನು ಪೂಜೆ ಮಾಡಿ ಗುರುವಾರ ಅಥವಾ ಶುಕ್ರವಾರ ಧರಿಸಬೇಕು. ಪಿತೃ ದೋಷದ ಪೂಜೆಯನ್ನೂ ಮಾಡಿಸಬೇಕು. ಪೂರ್ವಜರ ಶ್ರಾದ್ಧವನ್ನು ಮಾಡಿ. ಪರ ಸ್ತ್ರೀಯನ್ನು ಗೌರವದಿಂದ ಕಾಣಬೇಕು. ಕೆಟ್ಟ ಹವ್ಯಾಸ ಬಿಟ್ಟು ಪೂಜೆ, ಪ್ರಾರ್ಥನೆಗೆ ಹೆಚ್ಚಿನ ಗಮನ ನೀಡಿ. ತಂದೆ-ತಾಯಿಯನ್ನು ಗೌರವಿಸಿ. ಪ್ರತಿ ತಿಂಗಳು ಹಣ, ಹಣ್ಣಿನ ದಾನ ಮಾಡಿ.