ಮನುಷ್ಯನಿಗಿಂತ ಪ್ರಾಣಿಗಳು ತುಂಬಾ ಸೂಕ್ಷ್ಮ. ಮುಂದಾಗುವ ಘಟನೆಗಳ ಮುನ್ಸೂಚನೆ ಅವ್ರಿಗೆ ಮೊದಲೇ ಸಿಗುತ್ತದೆ. ಹಳೆಯ ಗ್ರಂಥಗಳಲ್ಲಿ ಕೂಡ ಪ್ರಾಣಿಗಳ ವರ್ತನೆ ಯಾವ ಸಂಕೇತ ನೀಡುತ್ತದೆ ಎಂಬುದನ್ನು ವಿವರವಾಗಿ ಹೇಳಲಾಗಿದೆ. ಪ್ರಾಣಿಗಳ ಯಾವ ವರ್ತನೆ ಶುಭ ಹಾಗೂ ಯಾವ ವರ್ತನೆ ಅಶುಭ ಸಂಕೇತ ನೀಡುತ್ತದೆ ಎಂಬ ವಿವರ ಜ್ಯೋತಿಷ್ಯ ಶಾಸ್ತ್ರದಲ್ಲಿದೆ.
ಬೆಕ್ಕು ರಸ್ತೆಗೆ ಅಡ್ಡವಾಗಿ ಹೋದ್ರೆ ಅದು ಅಶುಭ ಎನ್ನಲಾಗುತ್ತದೆ. ದುರ್ಘಟನೆ ನಡೆಯುವ ಸಂಕೇತವನ್ನು ಬೆಕ್ಕು ನೀಡುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಬೆಕ್ಕು ಅಡ್ಡ ಹೋದ್ರೆ ಅಲ್ಲಿಯೇ ಸ್ವಲ್ಪ ಹೊತ್ತು ನಿಂತು ಮುಂದೆ ಹೋಗಬೇಕು. ಮನೆಯ ಆಸು ಪಾಸು ಪದೇ ಪದೇ ಬೆಕ್ಕು ಅಳುವ ಶಬ್ದ ಕೇಳಿದ್ರೆ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಸಂಕಟ ಎದುರಾಗಲಿದೆ ಎಂದರ್ಥ.
ಹಸುವನ್ನು ತಾಯಿಗೆ ಹೋಲಿಕೆ ಮಾಡಲಾಗುತ್ತದೆ. ಹಸುವಿನಲ್ಲಿ ಮೂವತ್ತೈದು ಕೋಟಿ ದೇವಾನು ದೇವತೆಗಳು ನೆಲೆಸಿರುತ್ತವೆಯಂತೆ. ಮನೆ ಮುಂದೆ ಹಸು ಬಂದಾಗ ಹುಲ್ಲು, ಆಹಾರ ನೀಡದೆ ಕಳುಹಿಸಬಾರದು. ಹಸು ಮನೆ ಮುಂದೆ ನಿಂತು ಕೂಗಿದ್ರೆ ಇದು ಶುಭ ಸಂಕೇತ. ಮನೆಗೆ ಶೀರ್ಘವೇ ಹಣ ಹರಿದು ಬರಲಿದೆ ಎಂದರ್ಥ.
ನಾಯಿಯನ್ನು ನಾರಾಯಣನಿಗೆ ಹೋಲಿಸಲಾಗುತ್ತದೆ. ನಾಯಿಗೆ ಬೇಗನೆ ಶುಭ, ಅಶುಭ ಸಂಕೇತ ಸಿಗುತ್ತದೆಯಂತೆ. ನಿಮ್ಮ ಬಳಿ ಬಂದು ನಾಯಿ ಮಲಗಿದ್ರೆ ಇದು ಶುಭ ಸಂಕೇತ. ಶೀರ್ಘದಲ್ಲೇ ಶುಭ ಸುದ್ದಿ ಕೇಳಲಿದ್ದೀರಿ ಎಂದರ್ಥ. ಮನೆ ಮುಂದೆ ನಾಯಿ ಬಂದು ನಿನ್ನ ಮನೆ ಕಡೆ ಮುಖ ಮಾಡಿ ಮಲಗಿದ್ರೆ ಅಶುಭ ಸಂಕೇತ. ವಿಪತ್ತು ಎದುರಾಗಲಿದೆ ಎಂದು ಅರ್ಥೈಸಿಕೊಳ್ಳಿ.