ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಮಹತ್ವದ ಸ್ಥಾನವಿದೆ. ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದು ಇದೇ ದ್ವಾರದಿಂದ. ಹಾಗಾಗಿ ಈ ದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
ಯಾವ ಸ್ಥಾನದಲ್ಲಿ ದೇವಿ ದುರ್ಗೆಯ ಆರಾಧನೆ ನಡೆಯುತ್ತದೆಯೋ ಅಲ್ಲಿ ದುರ್ಗೆ ವಾಸಿಸ್ತಾಳೆ. ದುರ್ಗೆ ನಿಮ್ಮ ಮನೆಯಲ್ಲೂ ವಾಸ ಮಾಡಬೇಕೆಂದಾದಲ್ಲಿ ಈ ಮಾರ್ಗವನ್ನು ಅನುಸರಿಸಿ. ಮುಖ್ಯ ದ್ವಾರದಲ್ಲಿ ಮಾಡುವ ಈ ಉಪಾಯದಿಂದ ನವರಾತ್ರಿ ಕೃಪೆಗೆ ಒಳಗಾಗುವಿರಿ. ಧನ ಲಾಭವಾಗುವ ಜೊತೆಗೆ ರೋಗ ನಿಮ್ಮನ್ನು ಬಿಟ್ಟು ಓಡಿ ಹೋಗಲಿದೆ.
ಮನೆಯ ಮುಖ್ಯ ದ್ವಾರದಲ್ಲಿ ರಂಗೋಲಿಯನ್ನು ಹಾಕಿ.
ದೇವಿಯ ಪಾದದ ಚಿಹ್ನೆಯನ್ನು ಬಿಡಿಸಿ. ದೇವಿ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಾಳೆನ್ನುವ ರೀತಿಯಲ್ಲಿರಲಿ ಚಿತ್ರ.
ತೋರಣವನ್ನು ಹಾಕಿ. ಇದ್ರಿಂದ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ. ಮಾವು, ಅಶ್ವತ್ಥ, ಅಶೋಕ ಹಾಗೂ ಬಿಲ್ವ ಪತ್ರೆಯಿಂದ ತೋರಣ ಮಾಡಿ. ಎಲೆ ಒಣಗಿದ ತಕ್ಷಣ ಅದನ್ನು ತೆಗೆದು ಹಾಕಿ. ಒಣಗಿದ ಎಲೆ ಅಶುಭದ ಲಕ್ಷಣ.
ಮನೆ ಹಾಗೂ ಕಚೇರಿಯ ಮುಖ್ಯ ದ್ವಾರದ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಪಾತ್ರೆ ತುಂಬ ನೀರಿಡಿ. ಆ ನೀರಿನೊಳಗೆ ತಾಜಾ ಹೂ ಇಡಿ. ಇದ್ರಿಂದ ಸಾಕಷ್ಟು ಲಾಭವಾಗಲಿದೆ.
ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮಿಯ ಫೋಟೋವನ್ನು ಮನೆಯ ಮುಖ್ಯದ್ವಾರದ ಮುಂದೆ ಹಾಕಿ.
ಮನೆಯ ಮುಖ್ಯದ್ವಾರದ ಮುಂದೆ ಬೆಳ್ಳಿಯ ಸ್ವಸ್ತಿಕವನ್ನು ಹಾಕಿ.