ಪ್ರತಿ ಬಾರಿ ಪಾರ್ಲರ್ ಗೆ ಹೋಗಿ ಐಬ್ರೋಸ್ ಮಾಡಿಸಲು ಆಗುತ್ತಿಲ್ಲವೇ….? ಐಬ್ರೋ ಶೇಪ್ ಹಾಳಾಗಿದೆ ಎಂಬುದು ನಿಮ್ಮ ಚಿಂತೆಯೇ….? ಮನೆಯಲ್ಲಿ ಸರಳವಾಗಿ ಐಬ್ರೋಸ್ ಮಾಡಿಕೊಳ್ಳಲು ಟಿಪ್ಸ್ ಇಲ್ಲಿದೆ.
ನಿಮ್ಮ ಐಬ್ರೋದ ಶೇಪ್ ಸುತ್ತ ತುಂಬಾ ಕೂದಲು ಬರುವ ಮುನ್ನವೇ ಎಚ್ಚೆತ್ತುಕೊಳ್ಳಿ. ತುಂಬಾ ಕೂದಲು ಬೆಳೆದು ಬಿಟ್ಟರೆ ಶೇಪ್ ಕೊಡಲು ಕಷ್ಟವಾಗಬಹುದು.
ಐಬ್ರೋಸ್ ಅನ್ನು ಸ್ವಚ್ಛವಾಗಿ ತೊಳೆದು ಪೌಡರ್ ಹಚ್ಚಿ. ಚೂಪಾಗಿರುವ ಪ್ಲಕ್ಕರ್ ಅಥವಾ ಟ್ರಿಮ್ಮರ್ ಬಳಸಿ ನೀವು ಪ್ಲಕ್ಕಿಂಗ್ ಮಾಡುವ ಸಾಧನ ಚೂಪಾಗಿರುವಂತೆ ನೋಡಿಕೊಳ್ಳಿ. ಚೂಪಾಗಿರುವ ಪ್ಲಕ್ಕರ್ ಬಳಸಿದರೆ ನಿಮ್ಮ ಕೆಲಸವು ಸುಲಭವಾಗುತ್ತದೆ.
ನಿಮ್ಮ ಐಬ್ರೋ ಒಂದೊಂದು ಜಾಗದಲ್ಲಿ ಒಂದೊಂದು ರೀತಿಯಾಗಿ ಉದ್ದವಾಗುತ್ತದೆ. ಉದಾಹರಣೆಗೆ ಹುಬ್ಬುಗಳ ಕೊನೆಯಲ್ಲಿ ಬೆಳೆಯುವ ಕೂದಲು ಹುಬ್ಬುಗಳ ಆರಂಭದಲ್ಲಿ ಬೆಳೆಯುವ ಕೂದಲಿಗಿಂತ ಉದ್ದವಾಗಿರುತ್ತದೆ.
ಹಾಗಾಗಿ ಒಂದು ವೇಳೆ ನೀವು ಎಲ್ಲಾ ಕಡೆ ಕೂದಲು ಬೆಳೆಯಲಿ ಎಂದು ಕಾಯುತ್ತಿದ್ದರೆ ಹುಬ್ಬುಗಳಲ್ಲಿ ಕೂದಲು ಉದ್ದಕ್ಕೆ ಬೆಳೆದು ಕೀಳುವಾಗ ಹೆಚ್ಚು ನೋವಾಗುತ್ತದೆ. ಕೆಲವೇ ದಿನಗಳ ಅಂತರದಲ್ಲಿ ಹುಬ್ಬುಗಳಿಗೆ ಆಕಾರ ನೀಡುತ್ತಿದ್ದರೆ ಹೆಚ್ಚು ನೋವಾಗುವುದನ್ನು ತಡೆಯಬಹುದು.